Wednesday, 11th December 2024

ಫೋರ್ಬ್ಸ್‌ ಪಟ್ಟಿ: ಮುಕೇಶ್ ಅಂಬಾನಿಗೆ 10ನೇ ಸ್ಥಾನ

Jio brain

ಮುಂಬೈ: ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಹೊರಹೊಮ್ಮಿದ್ದಷ್ಟೇ ಅಲ್ಲದೆ, ಫೋರ್ಬ್ಸ್‌ ಪಟ್ಟಿಯಲ್ಲಿ ಜಗತ್ತಿನ 10ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ವಿಶ್ವದ ದೊಡ್ಡಣ್ಣ ಅಮೆರಿಕಾ ಹಾಗೂ ಚೀನಾ ನಂತರ ಗರಿಷ್ಠ ಸಂಖ್ಯೆಯ ಶತಕೋಟ್ಯಾಧೀಶರನ್ನು ಹೊಂದಿರುವ ರಾಷ್ಟ್ರ ಭಾರತ ಎಂದು ಫೋರ್ಬ್ಸ್‌ ಬಿಡುಗಡೆ ಮಾಡಿರುವ ವಿಶ್ವದ ಸಿರಿವಂತರ 35ನೇ ವಾರ್ಷಿಕ ಪಟ್ಟಿಯಲ್ಲಿ ಹೇಳಲಾಗಿದೆ.

ಅಂಬಾನಿ ಅವರು ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯವು 84.5 ಶತಕೋಟಿ ಡಾಲರ್ ಎಂದು ಫೋರ್ಬ್ಸ್‌ ವರದಿ ಹೇಳಿದೆ. ಇವರ ನಂತರ ಗೌತಮ್ ಅದಾನಿ, ಹೆಚ್‌ಸಿಎಲ್‌ನ ಶಿವ ನಡಾರ್ ಸೇರಿದ್ದಾರೆ.

ಅಮೆಜಾನ್‌ನ ಸಿಇಒ ಹಾಗೂ ಸಂಸ್ಥಾಪಕ ಜೆಫ್‌ ಬೇಜೋಸ್‌ ಅವರು ಸತತ ನಾಲ್ಕನೇ ಬಾರಿಗೆ ವಿಶ್ವದ ಅಗ್ರಗಣ್ಯ ಶ್ರೀಮಂತ ಎನಿಸಿ ಕೊಂಡಿದ್ದು, ಎರಡನೇ ಸ್ಥಾನದಲ್ಲಿ ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ನ ಸಿಇಒ ಎಲೋನ್ ಮಸ್ಕ್‌ ಇದ್ದಾರೆ.