Friday, 13th December 2024

ಮಹಿಳಾ ಕೈದಿಗಳ ಬಿಡುಗಡೆಗೆ ’ಮುಕ್ತ’ ಯೋಜನೆ

ಮುಂಬೈ: ಜೈಲಿನಲ್ಲಿರುವ, ತಮ್ಮ ಜಾಮೀನು ಮೊತ್ತ ಪಾವತಿಸಲಾಗದ ಹಾಗೂ ಕಾನೂನು ಅವಶ್ಯಕತೆಗಳನ್ನು ಪೂರೈಸಲಾಗದ ಮಹಿಳಾ ಕೈದಿಗಳ ಬಿಡುಗಡೆಗೆ ಶೀಘ್ರದಲ್ಲೇ ಯೋಜನೆ ಆರಂಭಿಸಲಿದೆ.

‘ಮುಕ್ತ’ ಎಂಬ ಹೆಸರಿನ ಈ ಯೋಜನೆ, ಅಪರಾಧಗಳನ್ನು ಮಾಡಿ ಜೈಲುಗಳಲ್ಲಿರುವ ಮಹಿಳಾ ಕೈದಿಗಳಿಗೆ ಪರಿಹಾರ ನೀಡುತ್ತದೆ ಮತ್ತು ಜೈಲುಗಳ ಮೇಲಿನ ಹೊರೆ ಕಡಿಮೆ ಮಾಡುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಹೇಳಿದ್ದಾರೆ.

ಅನೇಕ ಮಹಿಳೆಯರ ವಿರುದ್ಧ ಸಣ್ಣ ಪುಟ್ಟ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರೆಲ್ಲ ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ. ಇಂಥ ಮಹಿಳಾ ಕೈದಿ ಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ‘ಮುಕ್ತ’ ಎಂಬ ಯೋಜನೆ ಆರಂಭಿಸಲು ಯೋಜಿಸುತ್ತಿದೆ. ಇದು ಜಾಮೀನು ಆದೇಶಗಳ ನಂತರವೂ, ಬಿಡುಗಡೆಯ ಮೊತ್ತ ಪಾವತಿಸಲು ಸಾಧ್ಯವಾಗದೇ ಜೈಲಿನಲ್ಲೇ ಇರುವ ಮಹಿಳೆಯರಿಗೆ ಪ್ರಯೋಜನಕಾರಿಯಾಗಲಿದೆ’ ಎಂದು ಹೇಳಿದರು.