ಮುಂಬೈ/ನವದೆಹಲಿ: ಭಾರತೀಯ ಷೇರುಪೇಟೆಯು ಗುರುವಾರ ಭಾರೀ ಕುಸಿತಕ್ಕೆ ಸಾಕ್ಷಿಯಾಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 740 ಪಾಯಿಂಟ್ಸ್ ಕುಸಿತಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 224 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ 740.19 ಪಾಯಿಂಟ್ಸ್ ಇಳಿಕೆಗೊಂಡರೆ, ಎನ್ಎಸ್ಇ ಸೂಚ್ಯಂಕ ನಿಫ್ಟಿ 224.50 ಪಾಯಿಂಟ್ಸ್ ಕುಸಿದು 14,324.90 ಪಾಯಿಂಟ್ಸ್ಗೆ ತಲುಪಿದೆ.
ಟಾಟಾ ಸ್ಟೀಲ್, ಡಾ. ರೆಡ್ಡಿ’ಸ್ ಲ್ಯಾಬೊರೇಟರೀಸ್, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಮತ್ತು ಜೆಎಸ್ಡಬ್ಲ್ಯೂ ಸ್ಟೀಲ್ ಲಾಭ ಗಳಿಸಿವೆ. ನಿಫ್ಟಿ ಪಿಎಸ್ಯು ಬ್ಯಾಂಕ್, ಎಫ್ಎಂಸಿಜಿ, ಆಟೋ, ಇನ್ಫ್ರಾ, ಐಟಿ ಮತ್ತು ಇಂಧನ ಸೂಚ್ಯಂಕಗಳು ಶೇ.2 ರಿಂದ 3 ರಷ್ಟು ಕುಸಿದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ.1.8 ರಿಂದ 2.2 ರಷ್ಟು ಕುಸಿದವು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ