Saturday, 23rd November 2024

ಕುಸಿತ ಕಂಡ ಮುಂಬೈ ಷೇರುಪೇಟೆ: ಸೆನ್ಸೆಕ್ಸ್ 400 ಅಂಕ ಇಳಿಕೆ

ಮುಂಬೈ: ಭಾರತೀಯ ಷೇರುಪೇಟೆಯು ಗುರುವಾರ ಕೂಡ ಕುಸಿತ ಮುಂದುವರಿಸಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 400 ಅಂಕ  ಇಳಿಕೆಗೊಂಡರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 110 ಪಾಯಿಂಟ್ಸ್ ಕುಸಿದಿದೆ.

ಭಾರತೀಯ ಕಾಲಮಾನ 10.10ರ ವೇಳೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 388 ಪಾಯಿಂಟ್ಸ್ ಕುಸಿದು 48,791 ಪಾಯಿಂಟ್ಸ್‌ಗೆ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 104 ಪಾಯಿಂಟ್ಸ್‌ ಇಳಿಕೆಗೊಂಡು 14,441 ಪಾಯಿಂಟ್ಸ್ ತಲುಪಿದೆ.

ಎನ್‌ಎಸ್‌ಇನಲ್ಲಿ ಅಶೋಕ್ ಲೇಲ್ಯಾಂಡ್, ಟ್ರೆಂಟ್, ಇನ್ಫೋ ಎಡ್ಜ್‌, ಎ&ಟಿ ಇನ್ಫೊಟೆಕ್, ಪಿಎನ್‌ಬಿ, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್, ಟಿವಿಎಸ್ ಮೋಟಾರ್, ಎಂ & ಎಂ ಫೈನಾನ್ಶಿಯಲ್ ಪ್ರಮುಖವಾಗಿ ಕುಸಿತಗೊಂಡರೆ, ಟಾಟಾ ಸ್ಟೀಲ್, ಒಎನ್‌ಜಿಸಿ, ಗೇಲ್, ಯುಪಿಎಲ್, ಜಿಎಸ್‌ಡಬ್ಲ್ಯೂ ಸ್ಟೀಲ್, ಸಿಪ್ಲಾ, ಡಾ.ರೆಡ್ಡಿ ಲ್ಯಾಬ್ಸ್, ಲಾರ್ಸೆನ್‌ ಲಾಭ ಗಳಿಸಿದ ಷೇರುಗಳಾಗಿವೆ.