Saturday, 14th December 2024

110 ಕೋಟಿ ರೂ. ಮೌಲ್ಯದ ಟೆಸ್ಲಾ ಷೇರು ಮಾರಿದ ಮಸ್ಕ್

ನವದೆಹಲಿ: ಎಲಾನ್ ಮಸ್ಕ್ 110 ಕೋಟಿ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಟೆಸ್ಲಾ ಇಂಕ್​ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲಾನ್ ಮಸ್ಕ್ 21.5 ಲಕ್ಷ ಸ್ಟಾಕ್​ಗಳನ್ನು ಮಾರಾಟ ಮಾಡಿದ್ದಾರೆ.

ಎಲಾನ್ ಮಸ್ಕ್ 9,34,000 ಷೇರುಗಳನ್ನು ಮಾರಾಟ ಮಾಡಿ, 110 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದಾರೆ. ಈ ಷೇರು ಗಳನ್ನು ಮಾರಾಟ ಮಾಡಿರುವುದು, “ವರದಿ ಮಾಡಿದ ವ್ಯಕ್ತಿಯ ತೆರಿಗೆಗೆ ಸಂಬಂಧಿಸಿದ ಜವಾಬ್ದಾರಿಗಳ ಸ್ಟಾಕ್​ ಆಪ್ಷನ್ಸ್​ ಅನ್ನು ಪೂರ್ತಿಗೊಳಿಸುವ ಏಕೈಕ ಉದ್ದೇಶದಿಂದ” ಎಂದು ಫೈಲಿಂಗ್​ನಲ್ಲಿ ತಿಳಿಸಲಾಗಿದೆ.

ಬುಧವಾರದಂದು ಟೆಸ್ಲಾ ಷೇರು ಶೇ 4.3ರಷ್ಟು ಏರಿಕೆಯಾಗಿ, 1,067.95 ಯುಎಸ್​ಡಿಯಂತೆ ದಿನಾಂತ್ಯ ಕಂಡಿತು. ಈ ವಾರದಲ್ಲಿ ಆದ ನಷ್ಟದ ಪ್ರಮಾಣವು ಶೇ 13ಕ್ಕಿಂತ ಕಡಿಮೆ ಆಯಿತು. 2016ರ ನಂತರ ಇದು ಎಲಾನ್​ ಮಸ್ಕ್​ರ ಮೊದಲ ಮಾರಾಟ ಆಗಿದೆ.

ತೆರಿಗೆ ತಪ್ಪಿಸುವ ಸಲುವಾಗಿ ಈ ತನಕ ಪಡೆಯದ ಲಾಭದ ಮೊತ್ತವನ್ನು ತೆಗೆದುಕೊಳ್ಳಲು ಟೆಸ್ಲಾದಲ್ಲಿನ ನನ್ನ ಪಾಲಿನ ಶೇ 10 ರಷ್ಟು ಷೇರನ್ನು ಮಾರಾಟ ಮಾಡಲು ಪ್ರಸ್ತಾಪಿಸು ತ್ತಿದ್ದೇನೆ ಎಂದು ಹೇಳಿದ್ದರು.

35 ಲಕ್ಷ ಮತಗಳ ಪೈಕಿ ಶೇ 58ರಷ್ಟು ಮತಗಳು ಷೇರು ಮಾರಾಟದ ಪರವಾಗಿ ಬಿದ್ದಿದ್ದವು. 50 ವರ್ಷದ ಮಸ್ಕ್ ವಿಶ್ವದ ಸಿರಿವಂತ ವ್ಯಕ್ತಿಯಾಗಿದ್ದು, ಹತ್ತಿರ ಹತ್ತಿರ 30,000 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ್ದಾರೆ.