Friday, 13th December 2024

Mutual fund: 15X15X15 ಸೂತ್ರ ಪಾಲಿಸಿ; 15 ವರ್ಷಗಳಲ್ಲಿ ಕೋಟಿ ರೂ. ಗಳಿಸಿ!

Mutual fund

ಪ್ರತಿ ತಿಂಗಳು 15 ಸಾವಿರ ರೂ. ಹೂಡಿಕೆ (Mutual fund) ಮಾಡಿ 15 ವರ್ಷಗಳಲ್ಲಿ ಕೋಟ್ಯಧಿಪತಿಯಾಗಬಹುದು. ಇದಕ್ಕಾಗಿ ಪಾಲಿಸಬೇಕಾದ ಒಂದು ನಿಯಮವೆಂದರೆ (rule for investment) 15X15X15 ಸೂತ್ರ. ಈ ಸೂತ್ರವು ನಿಮ್ಮನ್ನು 15 ವರ್ಷಗಳಲ್ಲಿ ಕೋಟ್ಯಧಿಪತಿಯಾಗುವಂತೆ (Billionaire) ಮಾಡುತ್ತದೆ.

ಸಾಮಾನ್ಯವಾಗಿ ತಿಂಗಳಿಗೆ ಈ ಸೂತ್ರದನ್ವಯ 15 ಸಾವಿರ ರೂ. ಹೂಡಿಕೆ (Investment) ಮಾಡಿದರೆ 15 ವರ್ಷಗಳಲ್ಲಿ ಬಡ್ಡಿ ಸೇರಿ ಒಟ್ಟು ಹೂಡಿಕೆಯು 27 ಲಕ್ಷ ರೂ. ಆಗುತ್ತದೆ. ಆದರೆ ಇಲ್ಲಿ ಕೋಟ್ಯಧಿಪತಿಯಾಗಲು ತಂತ್ರ ಮತ್ತು ಪಾಲಿಸಬೇಕಾದ ಶಿಸ್ತಿನ ನಿಯಮವಿದೆ ಎಂಬುದು ನೆನಪಿರಲಿ.

15X15X15 ನಿಯಮ ಏನು?

ತಿಂಗಳಿಗೆ 15,000 ರೂ. ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸಲು ಅಳವಡಿಸಿಕೊಳ್ಳಬೇಕಾದ ಮುಖ್ಯ ಸೂತ್ರ 15X15X15 ನಿಯಮ. ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಇದು ಪಾಲಿಸಬೇಕಾದ ಅತೀ ಮುಖ್ಯ ನಿಯಮ.

ಈ ಸರಳ ಸೂತ್ರವು ಶೇ. 15 ವಾರ್ಷಿಕ ಆದಾಯವನ್ನು ನೀಡುವ ಮ್ಯೂಚುಯಲ್ ಫಂಡ್‌ನಲ್ಲಿ 15 ವರ್ಷಗಳವರೆಗೆ ಪ್ರತಿ ತಿಂಗಳು 15,000 ರೂ. ಗಳನ್ನು ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸಬಹುದು ಎಂದು ಹೇಳುತ್ತದೆ.

Mutual fund

ಶೇ. 15 ಆದಾಯ ಪಡೆಯುವುದು ಹೇಗೆ?

ಶೇ. 15ರಷ್ಟು ಆಕರ್ಷಕ ಆದಾಯವನ್ನು ಪಡೆಯಲು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಇದರಲ್ಲಿ ಹೂಡಿಕೆ ಅಪಾಯಕಾರಿಯಾಗಿದ್ದರೂ ದೀರ್ಘಾವಧಿಯ ಲಾಭವನ್ನು ಕೊಡುತ್ತದೆ.

ಈಕ್ವಿಟಿ ದೊಡ್ಡ ಮತ್ತು ಮಧ್ಯಮ ಕ್ಯಾಪ್ 10 ವರ್ಷಗಳಲ್ಲಿ ಶೇ. 15.93 ರಷ್ಟಿದೆ. ಇಕ್ವಿಟಿ ಫ್ಲೆಕ್ಸಿ-ಕ್ಯಾಪ್ ಮ್ಯೂಚುಯಲ್ ಫಂಡ್‌ಗಳು ಕಳೆದ 10 ವರ್ಷಗಳಲ್ಲಿ ಶೇ. 14.65ರಷ್ಟು ಲಾಭವನ್ನು ನೀಡಿವೆ.

Public Provident Fund: ಪಿಪಿಎಫ್‌‌ನಲ್ಲಿ ಇಷ್ಟು ಹಣ ಹೂಡಿಕೆ ಮಾಡಿದರೆ 1.5 ಕೋಟಿ ರೂ. ಗಳಿಸಲು ಸಾಧ್ಯ!

ದೊಡ್ಡ ಲಾಭವನ್ನು ಪಡೆಯಬೇಕಾದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಸ್ಥಿರವಾದ ಹೂಡಿಕೆ ಮಾಡುವುದು ಮುಖ್ಯವಾಗಿದೆ.

15 ವರ್ಷಗಳ ದೀರ್ಘಾವಧಿಯವರೆಗೆ ಪ್ರತಿ ತಿಂಗಳು ಸ್ಥಿರವಾಗಿ 15,000 ರೂ. ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಸ್ಥಿರವಾಗಿ ಹೂಡಿಕೆ ಮಾಡಿದರೆ ಮಾತ್ರ 15 ವರ್ಷಗಳಲ್ಲಿ 1 ಕೋಟಿ ರೂ. ಗಳಿಸಬಹುದು.