Friday, 13th December 2024

ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್ ಅಧಿಕಾರಾವಧಿ 5 ವರ್ಷ ವಿಸ್ತರಣೆ

ನವದೆಹಲಿ: ಟಾಟಾ ಸನ್ಸ್ ಮಂಡಳಿಯು ಟಾಟಾದ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಅಧಿಕಾರಾವಧಿಯನ್ನು 5 ವರ್ಷಗಳ ಅವಧಿಗೆ ವಿಸ್ತರಿಸಿದೆ.

ವಿಶೇಷ ಆಹ್ವಾನಿತರಾಗಿದ್ದ ರತನ್. ಎನ್.ಟಾಟಾ ಅವರು ಎನ್ ಚಂದ್ರಶೇಖರನ್ ಅವರ ನಾಯಕ ತ್ವದಲ್ಲಿ ಟಾಟಾ ಗ್ರೂಪ್ನ ಪ್ರಗತಿ ಮತ್ತು ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಅವರ ಅವಧಿಯನ್ನು ಇನ್ನೂ ಐದು ವರ್ಷಗಳ ಅವಧಿಗೆ ವಿಸ್ತರಿಸಲು ಶಿಫಾರಸು ಮಾಡಿದರು. ಮುಂದಿನ ಐದು ವರ್ಷಗಳವರೆಗೆ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಅವರನ್ನು ಮರುನೇಮಕ ಮಾಡಲು ಸರ್ವಾನುಮತದಿಂದ ಅನುಮೋದಿಸಿದರು. ಚಂದ್ರಶೇಖರನ್ ಅವರ ಪ್ರಸ್ತುತ ಅಧ್ಯಕ್ಷರ ಅವಧಿ ಇದೇ ತಿಂಗಳ ಅಂತ್ಯಕ್ಕೆ ಮುಗಿಯುತ್ತಿತ್ತು.

ಕಳೆದ ಐದು ವರ್ಷಗಳಿಂದ ಟಾಟಾ ಗ್ರೂಪ್ ಅನ್ನು ಮುನ್ನಡೆಸುವುದು ಒಂದು ಸುಯೋಗವಾಗಿದೆ. ಇನ್ನೂ ಐದು ವರ್ಷಗಳ ಕಾಲ ಟಾಟಾ ಗ್ರೂಪ್ ಅನ್ನು ಮುನ್ನಡೆಸುವ ಅವಕಾಶಕ್ಕಾಗಿ ಸಂತೋಷಪಡುತ್ತೇನೆ’ ಎಂದು ಚಂದ್ರಶೇಖರನ್ ಹೇಳಿದರು.

ಎನ್ ಚಂದ್ರಶೇಖರನ್ ಅವರು 2017 ರಲ್ಲಿ ಟಾಟಾ ಸನ್ಸ್‌ನ ಆಡಳಿತವನ್ನು ವಹಿಸಿಕೊಂಡರು. ಅವರ ಹಿಂದಿನ ಸೈರಸ್ ಮಿಸ್ತ್ರಿ ಅವರನ್ನು ಮಂಡಳಿಯಿಂದ ಹೊರಹಾಕಿದ ನಂತರ ಗುಂಪು ನಾಯಕತ್ವದ ಬಿಕ್ಕಟ್ಟು ಮತ್ತು ನಂಬಿಕೆಯ ಕೊರತೆ ಎದುರಿಸಿದ ಸಮಯದಲ್ಲಿ ಅಧ್ಯಕ್ಷರಾದರು.