Friday, 13th December 2024

Naga Chaitanya: ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆ ಡೇಟ್ ಫಿಕ್ಸ್; ಭರ್ಜರಿ ಪ್ಲ್ಯಾನ್

ಟಾಲಿವುಡ್ (Tollywood) ಆ್ಯಕ್ಟರ್ ನಾಗ ಚೈತನ್ಯ (Naga Chaitanya) ಅವರು 2017ರಲ್ಲಿ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರನ್ನು ಮದುವೆಯಾಗಿದ್ದರು. 4 ವರ್ಷಗಳ ನಂತರ ಅಂದರೆ 2021ರಲ್ಲಿ ಕೆಲ ಕಾರಣಗಳಿಂದ ಇಬ್ಬರು ಬೇರೆ ಬೇರೆಯಾಗಿ ವಿಚ್ಛೇದನ ಕೂಡ ಪಡೆದುಕೊಂಡರು. ಸಮಂತಾರನ್ನ ಬಿಟ್ಟ ನಾಗಚೈತನ್ಯ ಇತ್ತೀಚೆಗೆ ನಟಿ ಶೋಭಿತಾ ಧೂಳಿಪಾಲ (Sobhita Dhulipala) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ಯಾವಾಗ ಎನ್ನುವ ಕುತೂಹಲವಿತ್ತು. ಸದ್ಯ ಇದಕ್ಕೆ ಆನ್ಸರ್ ಸಿಕ್ಕಿದೆ.

ಹೈದರಾಬಾದ್​ನಲ್ಲಿ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಜೊತೆ ಇದೇ ಆಗಸ್ಟ್ 8ರಂದು ನಿಶ್ಚಿತಾರ್ಥ ಮಾಡಿಕೊಂಡರು. ಎರಡೂ ಕುಟುಂಬದ ಸದಸ್ಯರು, ಹಿರಿಯರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿತ್ತು. ಸದ್ಯ ನಾಗ ಚೈತನ್ಯ, ಶೋಭಿತಾ ಇಬ್ಬರು ತಮ್ಮ ಮದುವೆ ದಿನಾಂಕ ಶಾರ್ಟ್‌ಲಿಸ್ಟ್ ಮಾಡಿದ್ದಾರೆ ಎನ್ನಲಾಗಿದ್ದು, ವಿವಾಹವನ್ನು ಯಾವ ಸ್ಥಳದಲ್ಲಿ ಮದುವೆ ನಡೆಸಬೇಕೆಂಬ ಆಲೋಚನೆಯಲ್ಲಿ ತೊಡಗಿದ್ದಾರಂತೆ. ಹೀಗಾಗಿ ಅಕ್ಕಿನೇನಿ ನಾಗರ್ಜುನ್ ನಿವಾಸದಲ್ಲಿ ಸಡಗರ ಕಳೆಗಟ್ಟಿದೆ ಎಂದು ಹೇಳಲಾಗಿದೆ.

ಹೌದು, ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 4ರಂದು ಈ ನಟ, ನಟಿ ಹಸೆಮಣೆ ಏರಲಿದ್ದಾರೆ. ಇನ್ನೂ ಮದುವೆ ಸ್ಥಳಕ್ಕೆ ಬಂದರೆ ಫಾರಿನ್​ನಲ್ಲಿ ನಡೆಸಬೇಕೆಂಬ ಉದ್ದೇಶ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ವಿದೇಶದಲ್ಲಿ ಮದುವೆಗೆ ಆಗಿಲ್ಲ ಎಂದರೆ ರಾಜಸ್ಥಾನ ಅಥವಾ ಅಕ್ಕಿನೇನಿ ತವರೂರಾದ ಹೈದರಾಬಾದ್​ನಲ್ಲಿ ವಿವಾಹ ನಡೆಯಲಿದೆ ಎನ್ನಲಾಗಿದೆ. ಮದುವೆ ಪೂರ್ವ ಕಾರ್ಯಕ್ರಮ ಹಾಗೂ ಶಾಸ್ತ್ರಗಳನ್ನು ಅಕ್ಕಿನೇನಿ ಮನೆಗೆ ಸೊಸೆಯಾಗಲಿರುವ ಶೋಭಿತಾ ಧೂಳಿಪಾಲ ಅವರ ವೈಜಾಗ್‌ನಲ್ಲಿರುವ ಮನೆಯಲ್ಲಿ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.

ಇನ್ನೂ ಕೇವಲ ಆಪ್ತರಿಗಷ್ಟೇ ಮದುವೆ ಆಮಂತ್ರಣ ಇರಲಿದೆ ಎಂದು ಹೇಳಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರಿಗಷ್ಟೇ ಆಮಂತ್ರಣವಿರಲಿದೆ ಎನ್ನಲಾಗಿದೆ. ಯಾವಾಗ ನಾಗಚೈತನ್ಯ ತನ್ನ ಮೊದಲ ಪತ್ನಿ ಸಮಂತಾರನ್ನ ಬಿಟ್ಟರೋ ಆವಾಗಿನಿಂದ ಶೋಭಿತಾ ಜೊತೆ ಡೇಟಿಂಗ್​ನಲ್ಲಿದ್ದರು. ಇವರು ಆಗಾಗ ವೆಕೇಶನ್, ಟೂರ್​ಗೆ ಎಂದು ಅಲ್ಲಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.

ಆದರೂ, ಇವುಗಳನ್ನ ರೂಮರ್ಸ್ ಎಂದು ಹೇಳಲಾಗಿತ್ತು. ಆದರೆ ಅದೇ ಫೋಟೋಗಳು ಈಗ ನಿಜವಾಗಿವೆ. ಅಷ್ಟೇ ಅಲ್ಲದೇ ವಿಚ್ಛೇದನದ ನಂತರವೂ ನಾಗ ಚೈತನ್ಯ ಸ್ಯಾಮ್ ಜೊತೆಗಿನ ನೆನಪುಗಳನ್ನು ಹಾಗೇ ಇಟ್ಟುಕೊಂಡಿದ್ರು. ಇದೀಗ ಸೋಶಿಯಲ್ ಮೀಡಿಯಾದಲ್ಲಿದ್ದ ಸ್ಯಾಮ್ ಜೊತೆಗಿನ ಎಲ್ಲಾ ಫೋಟೋಗಳನ್ನು ಚೈತು ಡಿಲೀಟ್ ಮಾಡಿದ್ದಾರೆ.

ವಿಚ್ಛೇದನಕ್ಕೆ ಸಂಬಂಧಿಸಿದ ಪೋಸ್ಟ್ ಮತ್ತು 2018ರಲ್ಲಿ ಮಜಿಲಿ ಚಲನಚಿತ್ರಕ್ಕೆ ಸಂಬಂಧಿಸಿದ ಪೋಸ್ಟರ್ ನಾಗ ಚೈತನ್ಯ ಇನ್ಟಾದಲ್ಲಿ ಹಾಗೇ ಇತ್ತು. ಜೊತೆಗೆ ರೇಸ್ ಟ್ರ್ಯಾಕ್‌ನಲ್ಲಿ ಸಮಂತಾ ಜೊತೆ ತೆಗೆಸಿಕೊಂಡ ಫೋಟೋ ಕೂಡ ಇತ್ತು. ಅದಕ್ಕೆ ‘ಬ್ಯಾಕ್ ಥ್ರೋ…ಮಿಸೆಸ್ ಅಂಡ್ ದಿ ಗರ್ಲ್ ಫ್ರೆಂಡ್’ ಎಂದು ಶೀರ್ಷಿಕೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ನಾಗ ಚೈತನ್ಯ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಆ ಫೋಟೋವನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: BBK 11: ಇತಿಹಾಸ ನಿರ್ಮಿಸಿದ ವಾರದ ಕತೆ ಕಿಚ್ಚನ ಜೊತೆ: ದಾಖಲೆಯ 12.3 ಟಿವಿಆರ್ ಗಳಿಸಿದ ಬಿಗ್ ಬಾಸ್