Wednesday, 18th September 2024

ದೇಶದ ಮೊದಲ ಕ್ಷಿಪ್ರ ರೈಲು ನಮೋ ಭಾರತ್​ಗೆ ಹಸಿರು ನಿಶಾನೆ

ಗಾಜಿಯಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಗಾಜಿಯಾಬಾದ್‌ನಲ್ಲಿ ದೇಶದ ಮೊದಲ ಕ್ಷಿಪ್ರ ರೈಲು ನಮೋ ಭಾರತ್ ಗೆ ಚಾಲನೆ ನೀಡಿದರು.

ದೆಹಲಿ ಮತ್ತು ಮೀರತ್ ನಡುವೆ 82 ಕಿಲೋ ಮೀಟರ್ ಉದ್ದದ ಕಾರಿಡಾರ್ ನಿರ್ಮಿಸಲಾಗಿದ್ದು, ಈ ರೈಲಿಗೆ ‘ನಮೋ ಭಾರತ್’ ಎಂದು ಹೆಸರಿಡಲಾಗಿದೆ.

ಕಳೆದ ವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ ಅನುಮೋದನೆ ಪಡೆದ ನಂತರ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು.

ಈ ಹೈಸ್ಪೀಡ್ ರೈಲು ಅಕ್ಟೋಬರ್ ತಿಂಗಳಲ್ಲಿ ಸಾಹಿಬಾಬಾದ್‌ನಿಂದ ಚಲಿಸಲಿದೆ. ಗುಲ್ಧರ್ ಮೂಲಕ ಗಾಜಿಯಾಬಾದ್ ತಲುಪಿ, ಸುಮಾರು 17 ನಿಮಿಷ ಗಳಲ್ಲಿ ದುಹೈ ಡಿಪೋವನ್ನು ತಲುಪುತ್ತದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆ ಇಂದು ಪ್ರಧಾನಿ ಮೋದಿ ಅವರು ಗಾಜಿಯಾಬಾದ್‌ನಲ್ಲಿ 17 ಕಿ.ಮೀ ಉದ್ದದ ರ‍್ಯಾಪಿಡ್ ಎಕ್ಸ್ ರೈಲು ಕಾರಿಡಾರ್ ಅನ್ನು ಉದ್ಘಾಟಿಸಿದರು.

Leave a Reply

Your email address will not be published. Required fields are marked *