Friday, 13th December 2024

Narendra Modi: ಮೋದಿ ವಿದೇಶ ಪ್ರವಾಸ-ಬ್ರೂನಿಗೆ ಬಂದಿಳಿದ ಪ್ರಧಾನಿ, ನಾಳೆ ಸಿಂಗಾಪುರ ವಿಸಿಟ್‌

Narendra Modi

ಬ್ರೂನಿ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು ಬ್ರೂನಿಗೆ ತಲುಪಿದ್ದು, ಅಲ್ಲಿನ ಸುಲ್ತಾನ ಭರ್ಜರಿ ಸ್ವಾಗತ ಕೋರಿದ್ದಾರೆ. ಬ್ರೂನಿ(Brunei Visit) ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಅಲ್ಲಿನ ಸುಲ್ತಾನ ಹಾಜಿ ಅಲ್‌ ಮುಹ್ತಾದೇ ಬಿಲ್ಲಾ (Prince Haji Al-Muhtadee Billah) ಪ್ರಧಾನಿ ಮೋದಿಯನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಆಗ್ನೇಯ ಏಷ್ಯಾದಲ್ಲಿ ಈ ಬ್ರೂನಿ  ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊಲದ ಪ್ರಧಾನ ಮಂತ್ರಿ ಎನ್ನುವ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದಾಗಿದೆ. ಇದು ಎರಡು ದಿನಗಳ ಭೇಟಿಯಾಗಿದ್ದು, ಭಾರತ- ಬ್ರೂನಿ ನಡುವೆ ಬಾಂಧವ್ಯ ಬಲಪಡಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಬ್ರಿಟನ್ ರಾಣಿ ಎಲಿಜಬೆತ್ II ಬಳಿಕ ವಿಶ್ವದ ಎರಡನೇ ಅತಿ ಧೀರ್ಘಾವಧಿಯವರೆಗೆ ಬ್ರೂನಿ ದೇಶದ ದೊರೆಯಾಗಿರುವ ಸುಲ್ತಾನ್ ಹಸನಲ್ ಬೊಲ್ಕಿಯಾ, ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಇನ್ನು ಬ್ರೂನಿಯಲ್ಲಿರುವ ಭಾರತೀಯರು ನೆಚ್ಚಿನ ಪ್ರಧಾನಿಯನ್ನು ಸ್ವಾಗತಿಸಲೆಂದು ವಿಮಾನ ನಿಲ್ದಾಣಕ್ಕೆ ಅಗಮಿಸಿತ್ತು.

ಇನ್ನು ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ, ರಂಧೀರ್‌ ಜೈಸ್ವಲ್‌ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು,  ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ವಿದೇಶ ಪ್ರವಾಸ ಕೈಗೊಂಡಿದ್ದು, ಪ್ರವಾದ ಮೊದಲ ಭಾಗವಾಗಿ ಬಂದರ್‌ ಸೇರಿ ಬೆಗವಾನ್‌ ಎಂಬ ಪ್ರದೇಶಕ್ಕೆ ಭೇಟಿ ಕೊಡುತ್ತಿದ್ದಾರೆ. ಬ್ರೂನಿ ರಾಷ್ಟ್ರಕ್ಕೆ ಭೇಟಿ ಕೊಡುತ್ತಿರುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದಾಗಿದೆ.

https://x.com/ANI/status/1830902178799853731

ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಮತ್ತು ರಾಜಮನೆತನದ ಇತರ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಯಲಿದೆ ಈ ಸಭೆಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗುವ ನಿರೀಕ್ಷೆ ಇದೆ ಎಂದು ಪ್ರಧಾನಿ ಮೋದಿ ಪ್ರವಾಸಕ್ಕೂ ಮುನ್ನ ಹೇಳಿದ್ದಾರೆ.

ನಾಳೆ ಸಿಂಗಾಪುರ ಭೇಟಿ
ಪ್ರಧಾನಿ ಮೋದಿ ಬುಧವಾರ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ, ಪ್ರಧಾನಿ ಲಾರೆನ್ಸ್ ವಾಂಗ್, ಹಿರಿಯ ಸಚಿವ ಲೀ ಸೀನ್ ಲೂಂಗ್ ಮತ್ತು ಗೌರವಾನ್ವಿತ ಹಿರಿಯ ಸಚಿವ ಗೋ ಚೋಕ್ ಟಾಂಗ್ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲಿ ಸಿಂಗಾಪುರದ ವ್ಯಾಪಾರ ಸಮುದಾಯದ ಮುಖಂಡರನ್ನೂ ಮೋದಿ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

https://x.com/MEAIndia/status/1830803080427769876

ಈ ಸುದ್ದಿಯನ್ನೂ ಓದಿ: ಆಗಸ್ಟ್ ನಲ್ಲಿ ಉಕ್ರೇನ್ ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ