Wednesday, 11th December 2024

ನರೇಶ್ ಗೋಯಲ್ ನಿವಾಸದ ಮೇಲೆ ಸಿಬಿಐ ದಾಳಿ

ವದೆಹಲಿ: ಕೆನರಾ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ಜೆಟ್ ಏರ್ವೇಸ್ನ ಹಳೆಯ ಕಚೇರಿಗಳು ಮತ್ತು ಅದರ ಸಂಸ್ಥಾಪಕ ನರೇಶ್ ಗೋಯಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದೆ.

538 ಕೋಟಿ ರೂ.ಗಳನ್ನು ವಂಚಿಸಿದ ಆರೋಪದ ಮೇಲೆ ಗೋಯಲ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ಜೆಟ್ ಏರ್ವೇಸ್, ಗೋಯಲ್ ಮತ್ತು ವಿಮಾನಯಾನ ಸಂಸ್ಥೆಯ ಕೆಲವು ಮಾಜಿ ಅಧಿಕಾರಿ ಗಳು ಸೇರಿದಂತೆ ದೆಹಲಿ ಮತ್ತು ಮುಂಬೈನ ಸುಮಾರು ಏಳು ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಸಿಬಿಐ ತಿಳಿಸಿದೆ.

ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ತೀವ್ರ ನಗದು ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಸಾಲದಿಂದಾಗಿ 2019 ರ ಏಪ್ರಿಲ್ನಲ್ಲಿ ತನ್ನ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಿತು. ದೀರ್ಘಕಾಲದ ದಿವಾಳಿತನ ಪ್ರಕ್ರಿಯೆಯ ನಂತರ ಜೂನ್ 2021 ರಲ್ಲಿ ಜಲನ್-ಕಲ್ರಾಕ್ ಒಕ್ಕೂಟವು ವಿಮಾನಯಾನವನ್ನು ಸ್ವಾಧೀನಪಡಿಸಿ ಕೊಂಡಿತು.