Saturday, 14th December 2024

ಗಡಿ ಭದ್ರತೆಯು ರಾಷ್ಟ್ರೀಯ ಭದ್ರತೆಗೆ ಸಮಾನ: ಅಮಿತ್ ಶಾ

ಜೈಸಲ್ಮೇರ್: ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 57ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾತನಾಡಿದ ಅಮಿತ್ ಶಾ, ‘ಗಡಿ ಭದ್ರತೆಯು ರಾಷ್ಟ್ರೀಯ ಭದ್ರತೆಗೆ ಸಮಾನ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದರು.

ಭಾರತದ ಗಡಿ ಹಾಗೂ ಯೋಧರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತೋರಿಸಿಕೊಟ್ಟಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಪುಲ್ವಾಮಾ ಮತ್ತು ಉರಿ ದಾಳಿಯ ನಂತರ ದಿಟ್ಟ ನಿರ್ಧಾರ ತೆಗೆದುಕೊಂಡಿರುವ ನರೇಂದ್ರ ಮೋದಿ ಸರ್ಕಾರವು ಭಾರತದ ಗಡಿ ಮತ್ತು ಯೋಧರನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿದೆ ಎಂದು ಹೇಳಿ ದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2014ರಿಂದ ಗಡಿ ಭದ್ರತೆಗೆ ವಿಭಿನ್ನ ಪ್ರಾಮುಖ್ಯತೆ ನೀಡಿದೆ. ನಮ್ಮ ಗಡಿಯೊಳಗೆ ನುಸುಳಿದರೆ ಅಥವಾ ಭದ್ರತಾ ಸಿಬ್ಬಂದಿಯ ಮೇಲೆ ಎಲ್ಲಿಯಾದರೂ ದಾಳಿ ನಡೆದರೆ ನಾವು ತಕ್ಷಣ ಪ್ರತಿಕ್ರಿಯಿಸು ತ್ತೇವೆ. ನಮ್ಮ ಗಡಿ ಹಾಗೂ ಯೋಧರನ್ನು ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ’ ಎಂದು ಹೇಳಿದರು.

‘2016ರ ಉರಿ ಹಾಗೂ 2019ರ ಪುಲ್ವಾಮಾ ಉಗ್ರ ದಾಳಿಯ ಬಳಿಕ ವೈಮಾನಿಕ ಹಾಗೂ ಸರ್ಜಿಕಲ್ ಸ್ಟ್ರೈಕ್‌ ನಡೆಸಲು ಮೋದಿ ಸರ್ಕಾರವು ದೃಢ ನಿರ್ಧಾರವನ್ನು ಕೈಗೊಂಡಿತು. ಇಡೀ ವಿಶ್ವವೇ ಇದನ್ನು ಶ್ಲಾಘಿಸಿದೆ’ ಎಂದು ಹೇಳಿದರು.

ಗಡಿ ಭದ್ರತೆಗಾಗಿ ಉತ್ತಮ ಗಡಿ ಮೂಲಸೌಕರ್ಯವನ್ನು ಅಭಿವೃದ್ದಿಪಡಿಸಲು ಸರ್ಕಾರ ಬದ್ಧವಾಗಿದೆ. 2008ರಿಂದ 2014ರ ವರೆಗೆ ಗಡಿಯಲ್ಲಿ ರಸ್ತೆ ನಿರ್ಮಾಣದ ಬಜೆಟ್ ಸುಮಾರು ₹23,700 ಕೋಟಿ ಆಗಿತ್ತು. 2014ರಿಂದ 2020ರ ಅವಧಿಯಲ್ಲಿ ₹44,600 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.