Wednesday, 11th December 2024

ಎನ್‌.ಸಿ ಪಕ್ಷದ ಸಮಾವೇಶದ ವೇಳೆ ದುಷ್ಕರ್ಮಿಗಳಿಂದ ದಾಳಿ, ಮೂವರಿಗೆ ಗಾಯ

ಪೂಂಚ್: ಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾನುವಾರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಮಾವೇಶದ ವೇಳೆ ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದು, ಮೂವರು ಗಾಯಗೊಂಡಿದ್ದಾರೆ.

ಮೆಂಧರ್ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಅನಂತನಾಗ್ ಪಕ್ಷದ ಅಭ್ಯರ್ಥಿ ಮಿಯಾನ್ ಅಲ್ತಾಫ್ ರಜೌರಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಗಾಯಗೊಂಡವರು ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕರ್ತರು. ಕೂಡಲೇ ಅವರನ್ನು ಮೆಂಧರ್ ಉಪಜಿಲ್ಲಾ ಆಸ್ಪತ್ರೆಗೆ ಕರೆತರಲಾಯಿತು. ಗಾಯಾಳು ಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಅವರನ್ನು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಈ ಘಟನೆಯನ್ನು ಭದ್ರತೆಯಲ್ಲಿನ ದೊಡ್ಡ ಲೋಪ ಎಂದು ನ್ಯಾಷನಲ್ ಕಾನ್ಫರೆನ್ಸ್ ಮಾಜಿ ಶಾಸಕ ಜಾವೇದ್ ರಾಣಾ ಹೇಳಿದ್ದಾರೆ. ದಾಳಿಕೋರರನ್ನು ಹಿಡಿದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನಾನು ಪೊಲೀಸರಿಂದ ಒತ್ತಾಯಿಸುತ್ತೇನೆ ಎಂದು ರಾಣಾ ಹೇಳಿದ್ದಾರೆ.