Saturday, 14th December 2024

ನಕ್ಸಲ್‌’ರೊಂದಿಗೆ ಕಾದಾಟ: ನಾಪತ್ತೆಯಾಗಿದ್ದ ಯೋಧರ ಶವಗಳು ಪತ್ತೆ

ಬಸ್ತಾರ್ (ಛತ್ತೀಸ್ ಗಢ): ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಪತ್ತೆಯಾ ಗಿದ್ದ ಯೋಧರ ಮೃತದೇಹಗಳು ಪತ್ತೆಯಾಗಿವೆ. ಎನ್ ಕೌಂಟರ್ ನಡೆದ ಸ್ಥಳದಿಂದ ಭಾನುವಾರ 15 ಮೃತದೇಹಗಳು ಪತ್ತೆಯಾಗಿವೆ.

ಶನಿವಾರ ಐವರು ಯೋಧರು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿ ದ್ದಾರೆ. ಭಾನುವಾರ ಮೃತಪಟ್ಟ ಯೋಧರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಭಾಗದ ಟೆರಮ್ ಅರಣ್ಯಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಮಾವೋ ವಾದಿ ಮೃತಪಟ್ಟಿದ್ದಾನೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಕಶ್ಯಪ್ ಖಚಿತ ಪಡಿಸಿದ್ದಾರೆ.

ಶನಿವಾರ ಜೀವ ಕಳೆದುಕೊಂಡ ಐವರು ಸಿಬ್ಬಂದಿಗಳಲ್ಲಿ ಮೂವರ ಮೃತದೇಹ ಗಳು ಇನ್ನೂ ಕಾಡಿನಲ್ಲಿವೆ’ ಎಂದು ಛತ್ತೀಸ್ ಗಢದ ಪೊಲೀಸ್ ಮಹಾ ನಿರ್ದೇಶಕ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಯೋಧರ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿ ದ್ದಾರೆ. ಕಳೆದ ವರ್ಷ ಮಾರ್ಚ್ 21ರಂದು ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿ ದಾಳಿಯಲ್ಲಿ ಡಿಆರ್ ಜಿಯ 12 ಮಂದಿ ಸೇರಿದಂತೆ 17 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily