Saturday, 14th December 2024

ಎನ್ಕೌಂಟರ್ ಗೆ ಮೂವರು ನಕ್ಸಲರು ಬಲಿ

ಪಾಟ್ನಾ : ಭಾರತೀಯ ಭದ್ರತಾ ಪಡೆಗಳ ಎನ್ಕೌಂಟರ್ ಗೆ ಮೂವರು ನಕ್ಸಲರು ಬಲಿಯಾಗಿರುವ ಘಟನೆ ಭಾನುವಾರ ಬಿಹಾರದ ಗಯಾ ಜಿಲ್ಲೆಯ ಬಾರಾಚಟ್ಟಿಯಲ್ಲಿ ನಡೆದಿದೆ.

ಸ್ಥಳದಲ್ಲಿ ನಕ್ಸಲರು ಇರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು, ನಕ್ಸಲರ ವಿರುದ್ಧ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಕೋಬ್ರಾ 205 ನೇ ಬೆಟಾಲಿಯನ್ ನೇತೃತ್ವದಲ್ಲಿ ಎನ್ಕೌಂಟರ್ ನಡೆಸಲಾಗಿದ್ದು, ಘಟನೆಯಲ್ಲಿ ರೈಫಲ್ ಮತ್ತು ಐಎನ್‌ಎಸ್‌ಎಎಸ್ ರೈಫಲ್ ಸೇರಿದಂತೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.