Thursday, 3rd October 2024

Nayanthara: ಭಾರತೀಯ ಚಿತ್ರೋದ್ಯಮದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರು!

Nayanthara

ಭಾರತೀಯ ಸಿನಿಮಾ ರಂಗದಲ್ಲಿ (Indian film industry) ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರ (highest paid actress) ಸಾಲಿನಲ್ಲಿ ಕೇಳಿ ಬರುವ ಮೊದಲ ಹೆಸರು ನಯನತಾರಾ (Nayanthara). ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಸಾಕಷ್ಟು ಖ್ಯಾತಿ ಪಡೆದಿರುವ ನಯನತಾರಾ 50 ಸೆಕೆಂಡ್‌ನ ಜಾಹೀರಾತಿಗೆ 5 ಕೋಟಿ ರೂ. ಚಾರ್ಜ್ ಮಾಡುತ್ತಾರೆ. ರಜನಿಕಾಂತ್, ಶಾರುಖ್ ಖಾನ್, ಜಯರಾಮ್, ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅನೇಕ ದಿಗ್ಗಜರೊಂದಿಗೆ ಕೆಲಸ ಮಾಡಿರುವ ನಯನತಾರಾ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.

2018ರ ಫೋರ್ಬ್ಸ್ ಇಂಡಿಯಾದ ‘ಸೆಲೆಬ್ರಿಟಿ 100’ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ದಕ್ಷಿಣ ಭಾರತದ ನಟಿಯಾಗಿದ್ದಾರೆ. 20 ವರ್ಷಗಳಲ್ಲಿ 80 ಚಲನಚಿತ್ರಗಳಲ್ಲಿ ನಟಿಸಿರುವ ನಯನತಾರಾ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಟಿಯಾಗಬೇಕೆಂಬ ಆಸೆಯಿಂದ ಚಿತ್ರರಂಗಕ್ಕೆ ಬಂದವರಲ್ಲ ನಟಿ ನಯನತಾರಾ. ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂದು ಹೊರಟಿದ್ದರು. ಇದಕ್ಕಾಗಿ ಮೊದಲು ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದು, ಸಿಎ ಆಗುವತ್ತ ದೃಷ್ಟಿ ನೆಟ್ಟಿದ್ದರು. ಆದರೆ ಅವರ ಪ್ರತಿಭೆ ಅವರನ್ನು ಚಿತ್ರೋದ್ಯಮ ಪ್ರವೇಶಿಸುವಂತೆ ಮಾಡಿತು.

ಚಿತ್ರೋದ್ಯಮದಲ್ಲಿ ಅವಕಾಶ ಕಡಿಮೆ ಆದಾಗಲೂ ನಯನತಾರಾ ಮತ್ತೆ ಬಲವಾದ ಪಾತ್ರಗಳೊಂದಿಗೆ ಹಿಂದಿರುಗಿದರು. ಎಲ್ಲಾ ಚಿತ್ರ ನಿರ್ಮಾಪಕರು, ದೊಡ್ಡ ಹೀರೋಗಳು ಇವರನ್ನು ಕರೆದು ಕೆಲಸವನ್ನು ನೀಡಲು ಪ್ರಾರಂಭಿಸಿದರು. ವೃತ್ತಿಜೀವನದ ಆರಂಭದಲ್ಲಿ ನಟ ಸಿಂಬು ಅಥವಾ ಸಿಲಂಬರಸನ್ ಜೊತೆ ಡೇಟಿಂಗ್ ನಲ್ಲಿದ್ದರು. ಆದರೆ ಕೆಲವು ತಿಂಗಳ ಅನಂತರ ಬೇರ್ಪಟ್ಟರು. ಬಳಿಕ ನಟ ಪ್ರಭುದೇವ ಅವರೊಂದಿಗೆ ಸುಮಾರು ಮೂರೂವರೆ ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ.

Nayanthara

2015ರಲ್ಲಿ ʼನಾನು ರೌಡಿ ಧಾನ್ʼ ಚಿತ್ರದಲ್ಲಿ ಕೆಲಸ ಮಾಡುವಾಗ ವಿಘ್ನೇಶ್ ಶಿವನನ್ನು ನಯನತಾರಾ ಭೇಟಿಯಾದರು. ಇಬ್ಬರ ನಡುವೆ ಪ್ರೀತಿ ಅರಳಿತು ಮತ್ತು ಅವರು ಡೇಟಿಂಗ್ ಪ್ರಾರಂಭಿಸಿದರು. ಬಳಿಕ ಮದುವೆಯಾಗಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದರು. 2023ರಲ್ಲಿ ಶಾರುಖ್ ಖಾನ್ ಅವರೊಂದಿಗೆ ನಯನತಾರಾ ಜವಾನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 50 ಸೆಕೆಂಡ್‌ಗಳ ಜಾಹೀರಾತಿಗೆ 5 ಕೋಟಿ ರೂಪಾಯಿಗಳನ್ನು ಪಡೆಯುವ ನಯನತಾರಾ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಇವರು ಪ್ರತಿ ಚಿತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.

Actor Upendra: ʼಯುಐʼ ಚಿತ್ರ ಬಿಡುಗಡೆ ಬಗ್ಗೆ ಉಪೇಂದ್ರ ಹೇಳಿದ್ದೇನು?

ನಯನತಾರಾ ಕೊನೆಯ ಬಾರಿಗೆ ಅನ್ನಪೂರ್ಣಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಟೆಸ್ಟ್, ಮನ್ನಂಗಟ್ಟಿ; 1960ರಿಂದ, ಡಿಯರ್ ಸ್ಟೂಡೆಂಟ್, ಮತ್ತು ಥಾನಿ ಒರುವನ್ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.