Wednesday, 11th December 2024

Actress Nayanthara : ನಟಿ ನಯನತಾರಾ ‘ಎಕ್ಸ್‌’ ಹ್ಯಾಂಡಲ್‌ ಹ್ಯಾಕ್‌!

Actress Nayanthara

ನವದೆಹಲಿ: ಬಹುಭಾಷಾ ನಟಿ ಸೂಪರ್‌ಸ್ಟಾರ್‌ ನಯನತಾರಾ (Actress Nayanthara) ಶುಕ್ರವಾರ ಸಂಜೆ ತಮ್ಮ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಯಾವುದೇ ಅನಗತ್ಯ ಅಥವಾ ವಿಚಿತ್ರ ಟ್ವೀಟ್‌ ನಿರ್ಲಕ್ಷಿಸುವಂತೆ ನಟಿ ತನ್ನ ಅಭಿಮಾನಿಗಳಿಗೆ ವಿನಂತಿಸಿದ್ದಾರೆ. ಎಕ್ಸ್‌ನಲ್ಲಿ ಹಂಚಿಕೊಂಡ ಅವರ ಪೋಸ್ಟ್‌ನಲ್ಲಿ “ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ದಯವಿಟ್ಟು ಪೋಸ್ಟ್ ಮಾಡುವ ಯಾವುದೇ ಅನಗತ್ಯ ಅಥವಾ ವಿಚಿತ್ರ ಟ್ವೀಟ್‌ಗಳನ್ನು ನಿರ್ಲಕ್ಷಿಸಿ” ಎಂದು ಟ್ವೀಟ್ ಮಾಡಿದ್ದಾರೆ.

ನಯನತಾರಾ ಅವರ ಹಿಂದಿನ ಎಕ್ಸ್ ಪೋಸ್ಟ್ 2023 ರ ಹಿಟ್ ಜವಾನ್ ವಾರ್ಷಿಕೋತ್ಸವದಂದು (ಸೆಪ್ಟೆಂಬರ್ 7 ರಂದು ) ಪೋಸ್ಟ್‌ ಮಾಡಲಾಗಿತ್ತು. ಅವರು ಚಿತ್ರದ ಕ್ಲಿಪ್ ಹಂಚಿಕೊಂಡಿದ್ದರು.  “1 ವರ್ಷದ ಜವಾನ್. ಅಟ್ಲೀಯಿಂದ ಸಂಪೂರ್ಣ ಮಾಸ್ ಚಿತ್ರ . ಶಾರುಖ್ ಖಾನ್, ವಿಜಯ್ ಸೇತುಪತಿ ಸೂಪರ್ ಅಭಿಮಾನಿಗಳು ಎಲ್ಲವನ್ನೂ ಸಂಭ್ರಮಿಸಿದರು ಎಂದು ಬರೆದುಕೊಂಡಿದ್ದರು.

ಜವಾನ್‌ ಒಂದು ವರ್ಷದ ವಾರ್ಷಿಕೋತ್ಸವದಂದು ನಯನತಾರಾ ಪೋಸ್ಟ್ ಇಲ್ಲಿದೆ.

ನಯನತಾರಾ ಅವರ ಯಶಸ್ವಿ ಚಿತ್ರ ಜವಾನ್ ಈ ವರ್ಷದ ನವೆಂಬರ್‌ನಲ್ಲಿ ಜಪಾನ್‌ನಲ್ಲಿಯೂ ತೆರೆಕಾಣಲಿದೆ. ಶಾರುಖ್‌ ಖಾನ್‌ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ಏಕ್ ಕಹಾನಿ ಜಸ್ಟೀಸ್ ಕಿ … ಪ್ರತೀಕಾರದ ದಿನ… ಖಳನಾಯಕ ಮತ್ತು ನಾಯಕ… ಏಕ್ ಕಹಾನಿ ಜವಾನ್ ಕಿ… ಜಪಾನ್‌ನ ಚಿತ್ರಮಂದಿರಗಳಲ್ಲಿ ಈ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Mpox Vaccine : ಮಂಕಿ ಪಾಕ್ಸ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಒಪ್ಪಿಗೆ

ನಯನತಾರಾ ಈ ಹಿಂದೆ ಬಾರಿಗೆ ವಿವಾದಾತ್ಮಕ ಚಿತ್ರ ಅನ್ನಪೂರ್ಣಿಯಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಅವರು ಶಾರುಖ್ ಖಾನ್ ಎದುರು ಸ್ಮಾಶ್ ಹಿಟ್ ಜವಾನ್ ಚಿತ್ರದಲ್ಲಿ ನಟಿಸಿದ್ದರು, ಇದು ಬಾಲಿವುಡ್‌ ಅವರ ಭರ್ಜರಿ ಪ್ರವೇಶವಾಗಿತ್ತು.

ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ರ ಜೂನ್‌ನಲ್ಲಿ ಚೆನ್ನೈನಲ್ಲಿ ವಿವಾಹವಾದರು. ಮದುವೆಯಲ್ಲಿ ರಜನಿಕಾಂತ್, ಶಾರುಖ್ ಖಾನ್, ಸೂರ್ಯ, ಅಟ್ಲೀ ಮತ್ತು ಇತರ ತಾರೆಯರು ಭಾಗವಹಿಸಿದ್ದರು. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ಅವರು ತಮ್ಮ ಮಕ್ಕಳಿಗೆ ಉಳಗಮ್ ಮತ್ತು ಉಯಿರ್ ಎಂದು ಹೆಸರಿಟ್ಟರು.