Friday, 13th December 2024

ತನ್ನದೇ ಕಾರ್ ನಲ್ಲಿ ಸಜೀವ ದಹನವಾದ ಎನ್ ಸಿ ಪಿ ಮುಖಂಡ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಎನ್ ಸಿ ಪಿ ಮುಖಂಡ ಸಂಜಯ್ ಶಿಂಧೆ ತಮ್ಮದೇ ಕಾರ್ ನಲ್ಲಿ ಸಜೀವ ದಹನವಾಗಿ ರುವ ಘಟನೆ ನಡೆದಿದೆ.
ಮುಂಬೈ ಆಗ್ರಾ ರಸ್ತೆಯ ಪಿಂಪ್ಲಿಗಾವ್ ವಳಿ ಮಂಗಳವಾರ ತಡ ರಾತ್ರಿ ಈ ಘಟನೆ ನಡೆದಿದೆ. ಸಂಜಯ್ ಶಿಂಧೆ ಪಿಂಪ್ಲಿಗಾಂವ್ ಗೆ ತೆರಳುತ್ತಿದ್ದ ವೇಳೆ ಕಾರ್ ಚಲಿಸುತ್ತಿರುವಾಗಲೇ ಹೊತ್ತಿ ಉರಿದಿದೆ. ಕಾರ್ ನಲ್ಲಿ ಸ್ಯಾನಿಟೈಸರ್ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಸಿಕ್ ಜಿಲ್ಲೆಯ ರಾಜಕಾರಣಿಯಾಗಿರುವ ಸಂಜಯ್ ಶಿಂಧೆ ವೈನ್ ಉದ್ಯಮಿಯೂ ಸಹ ಆಗಿದ್ದರು.