Wednesday, 11th December 2024

ಎನ್‍ಸಿಪಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬಾರದು: ಪವಾರ್’ಗೆ ಮನವಿ

ಮುಂಬೈ: ಯಾವುದೇ ಕಾರಣಕ್ಕೂ ಎನ್‍ಸಿಪಿ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬಾರದು ಎಂದು ಶರದ್‍ ಪವಾರ್ ಅವರಿಗೆ ಒಕ್ಕೊರಲ ಮನವಿ ಮಾಡಿಕೊಳ್ಳಲಾಗುತ್ತಿದೆ.

ಪವಾರ್ ಅವರ ಅನಿರಿಕ್ಷಿತ ಘೋಷಣೆಯಿಂದ ಘಾಸಿಗೊಳಗಾಗಿರುವ ಪಕ್ಷದ ಕಾರ್ಯ ಕರ್ತರು ಹಾಗೂ ಮುಖಂಡರುಗಳು ಕಣ್ಣೀರು ಹಾಕುತ್ತ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ವಾಯು ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ನೈರ್ಮಲ್ಯ ಕಾರ್ಯಕರ್ತೆಯೊಬ್ಬರು ಕಣ್ಣಿರು ಹಾಕುತ್ತ ಪವಾರ್ ರಾಜೀನಾಮೆ ನಿರ್ಧಾರ ದಿಂದ ಹಿಂದೆ ಸರಿಯುವಂತೆ ನೀವು ಒತ್ತಡ ಹೇರಬೇಕು ಎಂದು ಮನವಿ ಮಾಡಿಕೊಂಡಿ ದ್ದಾರೆ. ತಮಗಾದ ಈ ಅನುಭವವನ್ನು ಸುಳೆ ಅವರು ಫೇಸ್‍ಬುಕ್ ಲೈವ್‍ನಲ್ಲಿ ಹಂಚಿ ಕೊಂಡಿದ್ದಾರೆ.

ಮರಾಠಿಯಲ್ಲಿ ಮಾತನಾಡಿರುವ ಸಂದೇಶ್ ಪರ್ವಾ ಎಂಬ ನೈರ್ಮಲ್ಯ ಕಾರ್ಯಕರ್ತೆ ಸುಳೆ ಅವರಿಗೆ ಪವಾರ್ ಅವರ ನಿರ್ಧಾರ ಬದಲಿಸುವಂತೆ ಮನವಿ ಮಾಡಿಕೊಂಡಿರುವ ವಿಡಿಯೋ ಫೇಸ್‍ಬುಕ್‍ನಲ್ಲಿ ವೈರಲ್ ಆಗಿದೆ.