ಆರ್ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಎನ್ಡಿವಿಯ ಶೇ.29.18 ಪಾಲು ಹೊಂದಿದ್ದು, ಇದನ್ನು ಅದಾನಿ ಸಮೂಹ ಖರೀದಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸುದೀಪ್ತ ಭಟ್ಟಾಚಾರ್ಯ, ಸಂಜಯ್ ಪುಗಲಿಯಾ ಹಾಗೂ ಸೆಂಥಿಲ್ ಸಿನ್ನಿಯಾ ಚೆಂಗಲವ ರಾಯನ್ ಅವರನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
ಎನ್ಡಿಟಿವಿಯ ಶೇ.29.18ರಷ್ಟು ಷೇರುಗಳನ್ನು ಅದಾನಿ ಸಮೂಹ ಖರೀದಿ ಮಾಡಿದ್ದು, ಇನ್ನೂ ಶೇ.26ರಷ್ಟು ಷೇರುಗಳ ಖರೀದಿಗೆ ಉತ್ಸಾಹ ಹೊಂದಿರುವುದಾಗಿ ಘೋಷಿಸಿದೆ.
ಅದಾನಿ ಸಮೂಹವು ಆಗಸ್ಟ್ನಲ್ಲಿ ಆರ್ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನು ಬಹುತೇಕ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇನ್ನುಳಿದ ಶೇಕಡಾ 26ರಷ್ಟು ಷೇರುಗಳನ್ನು ಖರೀದಿಸುವಲ್ಲಿ ಯಶಸ್ವಿಯಾದರೆ ಒಟ್ಟು ಶೇಕಡಾ 55.18ರಷ್ಟು ಷೇರುಗಳು ಅದಾನಿ ಸಮೂಹದ ಪಾಲಾಗಲಿವೆ. ಇದರೊಂದಿಗೆ ಎನ್ಡಿಟಿವಿ ಆಡಳಿತ ಮಂಡಳಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳು ವುದು ಅದಾನಿ ಸಮೂಹಕ್ಕೆ ಸಾಧ್ಯವಾಗಲಿದೆ.