Wednesday, 11th December 2024

13 ಸಾವಿರ ಗಡಿ ದಾಟಿದ ನಿಫ್ಟಿ, ಸೆನ್ಸೆಕ್ಸ್ ಏರಿಕೆ

ಮುಂಬೈ: ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿಗಳು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಲಾಭಾಂಶ ದಾಖಲಿಸಿವೆ. ಸೆನ್ಸೆಕ್ಸ್ 120ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದರೆ, ನಿಫ್ಟಿ 13,000 ದ ಗಡಿ ದಾಟಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 126.62 ಅಂಶ ಏರಿದ್ದು 44,276.34 ಅಂಶದಲ್ಲಿ ವಹಿವಾಟು ನಡೆಸಿದೆ. ಇದೇ ವೇಳೆ, ನಿಫ್ಟಿ 32.45 ಅಂಶ ಏರಿ 13,001.40 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಸ್​ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಷೇರು ಶೇಕಡ 2.5 ಏರಿಕೆಯೊಂದಿಗೆ ವಹಿವಾಟು ಮುಂದುವರಿಸಿದರೆ, ಇನ್​ಫೋಸಿಸ್​, ಸನ್​ಫಾರ್ಮಾ, ಬಜಾಜ್ ಆಟೋ, ಎಚ್​ಡಿಎಫ್​ಸಿ ಷೇರುಗಳು ಲಾಭಾಂಶದಲ್ಲಿ ವಹಿವಾಟು ನಡೆಸಿವೆ.