Friday, 13th December 2024

Nivin Pauly: ಮೀಟೂ ಕೇಸ್‌ ಬಗ್ಗೆ ಮೌನ ಮುರಿದ ನಿವಿನ್‌ ಪೌಲಿ-ಕಾನೂನು ಸಮರಕ್ಕೆ ಸಿದ್ದ ಎಂದ ʻಪ್ರೇಮಂʼ ನಟ

Nivin Pauly

ಕೊಚ್ಚಿ: ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ(Sexual Abuse) ಪ್ರಕರಣ ದಾಖಲಾಗಿರುವ ಬಗ್ಗೆ ಸೂಪರ್‌ ಹಿಟ್‌  ಮಲಯಾಳಂ ಸಿನಿಮಾ ”ಪ್ರೇಮಂ” ಖ್ಯಾತಿಯ ನಟ ನಿವಿನ್ ಪೌಲಿ (Nivin Pauly) ಮೌನ ಮುರಿದಿದ್ದಾರೆ. ಇದು ನಿರಾಧಾರ ಆರೋಪವಾಗಿದ್ದು, ಈ ಪ್ರಕರಣದಲ್ಲಿ ತಮ್ಮನ್ನು ತಾವು ನಿರ್ದೋಷಿ ಎಂಬುದನ್ನು ಸಾಬೀತುಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ.

2023 ರ ನವೆಂಬರ್‌ನಲ್ಲಿ ಚಲನಚಿತ್ರದಲ್ಲಿ ಪಾತ್ರ ನೀಡುವ ಸೋಗಿನಲ್ಲಿ ಪೌಲಿ ದುಬೈನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ನೆರಿಯಮಂಗಲಂ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಕೇರಳದ ಎರ್ನಾಕುಲಂನಲ್ಲಿ ಈ ಪ್ರಕರಣವನ್ನು ಅಧಿಕೃತವಾಗಿ ದಾಖಲಿಸಲಾಗಿದ್ದು, ನಟ ಮತ್ತು ಇತರ ಐವರ ವಿರುದ್ಧ ಜಾಮೀನು ರಹಿತ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಒಟ್ಟು ಆರು ಆರೋಪಿಗಳಿದ್ದು ಇದು ಸಂಚಿನ ಕೃತ್ಯ ಎಂದು ಹೇಳಲಾಗಿದೆ.

ಅವಳು ಯಾರೆಂದು ನನಗೆ ತಿಳಿದಿಲ್ಲ, ನಾನು ಅವಳನ್ನು ನೋಡಿಲ್ಲ ಅಥವಾ ಅವಳೊಂದಿಗೆ ಮಾತನಾಡಿಲ್ಲ. ಇದು ಆಧಾರರಹಿತ ಆರೋಪ. ಇದನ್ನು ಸು‍ಳ್ಳು ಎಂದು ಸಾಬೀತುಪಡಿಸಲು ನಾನು ಯಾವುದೇ ಹಂತಕ್ಕೂ ಹೋಗುತ್ತೇನೆ. ಸತ್ಯವು ಅಂತಿಮವಾಗಿ ಹೊರಬರಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅದಕ್ಕಾಗಿ ನಾನು ಎಲ್ಲರಿಗೂ ಸಹಕರಿಸುತ್ತೇನೆ. ನಲವತ್ತೈದು ದಿನಗಳ ಹಿಂದೆ, ನನ್ನ ವಿರುದ್ಧ ದೂರು ಇದೆ ಎಂದು ಪೊಲೀಸರು ನನಗೆ ಕರೆ ಮಾಡಿದರು. ನಾನು ಎಂದಿಗೂ ನೋಡಿಲ್ಲ ಅಥವಾ ಭೇಟಿಯಾಗಿಲ್ಲ ಎಂದು ಅವರಿಗೆ ತಿಳಿಸಿದ್ದೆ ಎಂದು ಅವರು ಹೇಳಿದ್ದಾರೆ.

ಇದರ ಹಿಂದೆ ಷಡ್ಯಂತ್ರ ಇರಬಹುದು.  ನನ್ನ ಹಿಂದೆ ನನ್ನ ಕುಟುಂಬವಿದೆ. ನಾನು ಮೊದಲು ನನ್ನ ತಾಯಿಗೆ ಕರೆ ಮಾಡಿದ್ದೇನೆ ಆತಂಕ ಪಡಬೇಕಾಗಿಲ್ಲ. ನಾನು ಈ ಪ್ರಕರಣದಲ್ಲಿ ಹೋರಾಡುತ್ತೇನೆ ಎಂದು ನಿವಿನ್‌ ಪೌಲಿ ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ಆರು ಆರೋಪಿಗಳಿದ್ದು ಶ್ರೇಯಾ ಎಂಬುವರು ಮೊದಲ ಆರೋಪಿಯಾಗಿದ್ದಾರೆ. ನಿರ್ಮಾಪಕ ಎ.ಕೆ.ಸುನಿಲ್ ಮತ್ತು  ಬಿನು, ಬಶೀರ್, ಕುಟ್ಟನ್ ಮತ್ತು ನಿವಿನ್ ಪೌಲಿ ಆರೋಪಿಗಳಾಗಿದ್ದಾರೆ. ಸುನೀಲ್‌ ಆರನೇ ಆರೋಪಿಯಾಗಿದ್ದಾರೆ. ಯುರೋಪ್‌ನಲ್ಲಿ ಸುಶ್ರೂಷಕಿ ಕೆಲಸಕ್ಕೆ ಹುಡುಕುತ್ತಿದ್ದ ವೇಳೆ ವೇಳೆ ಶ್ರೇಯಾ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದೆ. ಅವರು ಕೆಲಸ ಕೊಡಿಸುವ ಭರವಸೆ ಕೊಟ್ಟಿದ್ದರು. ಕೆಲಸವು ಸಿಗದೇ ಹೋದಾಗ  ತನ್ನ ಹಣವನ್ನು ಮರಳಿ ಕೇಳಿದೆ. ಆ ಸಮಯದಲ್ಲಿ, ಶ್ರೇಯಾ ಚಲನಚಿತ್ರದಲ್ಲಿ  ಪಾತ್ರವೊಂದನ್ನು ನೀಡಿದರು ಎಂದು ಆರೋಪಿಸಲಾಗಿದೆ. ತನಗೆ  ಮಾದಕ ದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಎಲ್ಲಾ ಆರು ಆರೋಪಿಗಳು ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಕಳೆದ ನವೆಂಬರ್ ನಲ್ಲಿ ದುಬೈನಲ್ಲಿ ನಡೆದಿವೆ ಎಂದು ದೂರಿನಲ್ಲಿ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Me Too Row: ʻಕ್ಯಾರವಾನ್‌ನಲ್ಲೂ ಹಿಡನ್‌ ಕ್ಯಾಮೆರಾʼ- ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ನಟಿ ರಾಧಿಕಾ ಶರತ್‌ಕುಮಾರ್‌