Friday, 13th December 2024

ಜುಲೈ 5ರವರೆಗೆ ತಜಿಂದರ್ ಸಿಂಗ್ ಬಗ್ಗಾ ಬಂಧನಕ್ಕೆ ತಡೆ

ಚಂಡೀಗಡ: ಬಿಜೆಪಿ ಮುಖಂಡ ತಜಿಂದರ್ ಪಾಲ್‌ ಸಿಂಗ್ ಬಗ್ಗಾ ಅವರನ್ನು ಜುಲೈ 5ರವರೆಗೆ ಬಂಧಿಸದಂತೆ ಮಂಗಳವಾರ ಹರಿಯಾಣ ಮತ್ತು ಪಂಜಾಬ್ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ.

ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ದಂತೆ ಅವರ ಹೇಳಿಕೆ ಮತ್ತು ವಿಡಿಯೊ ಆಧರಿಸಿ ಪಂಜಾಬ್ ಪೊಲೀಸರು ಕಳೆದ ಶುಕ್ರವಾರ ತಜಿಂದರ್‌ ಅವರನ್ನು ಬಂಧಿಸಿದ್ದರು.

ಬಳಿಕ, ಬಗ್ಗಾ ಬಂಧನಕ್ಕೆ ತಡೆ ವಿಧಿಸಿದ್ದ ಹೈಕೋರ್ಟ್, ಮೇ 10ರ ಮುಂದಿನ ವಿಚಾರಣೆವರೆಗೂ ತಜಿಂದರ್ ಸಿಂಗ್ ಬಗ್ಗಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ರಕ್ಷಣೆ ನೀಡಿತ್ತು.

ಬಗ್ಗಾ ಬಂಧನದಲ್ಲಿ ಭಾಗಿಯಾಗಿರುವ 12 ಪಂಜಾಬ್ ಪೊಲೀಸ್ ಅಧಿಕಾರಿಗಳನ್ನು ಹರಿಯಾಣ ಪೊಲೀಸರು ಕುರುಕ್ಷೇತ್ರದಲ್ಲಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಹರಿಯಾಣ ಸರ್ಕಾರದ ವಿರುದ್ಧ ಪಂಜಾಬ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿತ್ತು.

ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ಏರಿಯಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಎಸ್‌ಎಎಸ್ ನಗರಕ್ಕೆ ಕರೆದೊ ಯ್ಯುತ್ತಿದ್ದಾಗ, ಹರಿಯಾಣ ಪೊಲೀಸರು ಅವರನ್ನು ಮಧ್ಯದಲ್ಲಿ ತಡೆದು ಕುರುಕ್ಷೇತ್ರಕ್ಕೆ ಕರೆತಂದರು. ಅಲ್ಲಿ ಅವರನ್ನು ದೆಹಲಿ ಪೊಲೀಸರ ಕಸ್ಟಡಿಗೆ ನೀಡಲಾಯಿತು ಎಂದು ಪಂಜಾಬ್ ಸರ್ಕಾರ ತನ್ನ ಅರ್ಜಿಯಲ್ಲಿ ಆರೋಪಿಸಿತ್ತು.

ಆದರೆ, ಪಂಜಾಬ್ ಆರೋಪವನ್ನು ತಳ್ಳಿ ಹಾಕಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸತ್ಯಪಾಲ್ ಜೈನ್, ಒಬ್ಬ ಅಧಿಕಾರಿ ಯನ್ನೂ ವಶಕ್ಕೆ ಪಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಬಗ್ಗಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು, ಪಂಜಾಬ್ ಪೊಲೀಸರ ವಿರುದ್ಧ ಎರಡು ಪ್ರಕರಣಗಳನ್ನೂ ದಾಖಲಿಸಿ ದ್ದಾರೆ.