Saturday, 14th December 2024

ಎಂ.ಎಂ.ಶಾಂತನಗೌಡರ ಗೌರವಾರ್ಥ ಸಂತಾಪ ಸೂಚಕ ಸಭೆ, ಸುಪ್ರೀಂ ಕಲಾಪ ಸ್ಥಗಿತ

ನವದೆಹಲಿ: ಕಳೆದ ವಾರ ನಿಧನರಾದ ನ್ಯಾಯಮೂರ್ತಿ ಎಂ.ಎಂ.ಶಾಂತನಗೌಡರ ಅವರ ಗೌರವಾರ್ಥ ಸೋಮವಾರ ಸುಪ್ರೀಂ ಕೋರ್ಟ್‌ ಆವರಣದಲ್ಲಿ ಸಂತಾಪ ಸೂಚಕ ಸಭೆ ನಡೆಸಿ, ದಿನದ ಕಲಾಪವನ್ನು ಸ್ಥಗಿತಗೊಳಿಸಲಾಯಿತು.

ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿರುವ ಎನ್‌.ವಿ.ರಮಣ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ ಆವರಣದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು.

ಶಾಂತನಗೌಡರ ಅವರ ಹಠಾತ್ ನಿಧನದಿಂದ ತೀವ್ರ ನೋವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ್ ಹೇಳಿದರು. ನಂತರ ಎರಡು ನಿಮಿಷಗಳ ಮೌನ ಆಚರಿಸುವ ಮೂಲಕ ಅಗಲಿದ ನ್ಯಾಯಮೂರ್ತಿಯವರಿಗೆ ಗೌರವ ಸಲ್ಲಿಸಲಾಯಿತು.

ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಯು.ಯು.ಲಲಿತ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್, ಎಲ್ ನಾಗೇಶ್ವರ ರಾವ್, ಎಸ್ ರವೀಂದ್ರ ಭಟ್ ಮತ್ತು ಹೃಷ್ಕೇಶ್ ರಾಯ್ ಕೂಡ ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.