Saturday, 14th December 2024

ಲಸಿಕೆಯಿಂದಲ್ಲ, ಮೆಡಿಸಿನ್ ಬೇಡ, ಒಂದೇ ಒಂದು ಪೆಗ್ಗಿಗೆ ಓಡಿ ಹೋಗುತ್ತೆ ಕರೋನಾ…!

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕರೋನಾ ಸೋಂಕು ಕೈಮೀರಿ ಹೋಗುತ್ತಿರುವಾಗ ನಿಯಂತ್ರಣ ಹೇರಲು ಸರ್ಕಾರ 6 ದಿನಗಳ ಲಾಕ್ ಡೌನ್ ಘೋಷಿಸಿದೆ.

ಹೀಗಾಗಿ ಸೋಮವಾರ ಲಿಕ್ಕರ್ ಶಾಪ್ ಗಳ ಮುಂದೆ ಜನರು ಸಾಲಿನಲ್ಲಿ ನಿಂತು ಮದ್ಯ ಖರೀದಿಸುವುದು ಕಂಡು ಬಂತು. ಮದ್ಯ ಪ್ರಿಯರು ಬಾರ್ ಗಳಿಗೆ, ಲಿಕ್ಕರ್ ಮಳಿಗೆಗಳಿಗೆ ಎಡತಾಕಿದ್ದಾರೆ. ಕರೋನಾ ನಿಯಮಗಳನ್ನು ಗಾಳಿಗೆ ತೂರಿ ಜನರು ಮದ್ಯ ಖರೀದಿ ಸುವುದರಲ್ಲಿ ಬ್ಯುಸಿಯಾಗಿದ್ದರು.

ಆದರೆ, ಇದೇ ಸಂದರ್ಭದಲ್ಲಿ ಶಿವಪುರಿ ಗೀತಾ ಕಾಲೋನಿಯಲ್ಲಿ ಮದ್ಯ ಖರೀದಿಸಲು ಬಂದ ಮಹಿಳೆ, ಇಂಜೆಕ್ಷನ್, ಲಸಿಕೆಗಳಿಂದ ಕರೋನಾ ಓಡುವುದಿಲ್ಲ, ಏನೂ ಪ್ರಯೋಜನವಿಲ್ಲ, ಆಲ್ಕೋಹಾಲ್ ಕೆಲಸ ಮಾಡುತ್ತದೆ, ಅದರಿಂದ ದೇಹಕ್ಕೆ ಆರೋಗ್ಯ ಸಿಗುತ್ತದೆ ಎಂದಿದ್ದಾರೆ. ಮೆಡಿಸಿನ್ ಸಹಾಯ ಮಾಡುವುದಿಲ್ಲ, ಒಂದು ಪೆಗ್ ಹಾಕಿದರೆ ಎಲ್ಲ ಹೋಗುತ್ತದೆ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ.