Monday, 14th October 2024

ಮೂರು ದಿನ ತಿರುಪತಿ ತಿಮ್ಮಪ್ಪನ ದರ್ಶನ ರದ್ದು

ತಿರುಪತಿ: ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನವನ್ನು ಸೂರ್ಯಗ್ರಹಣ, ಚಂದ್ರಗ್ರಹಣ ಹಾಗೂ ದೀಪಾವಳಿ ಕಾರಣ ದಿಂದ ಮೂರು ದಿನಗಳ ಕಾಲ ರದ್ದು ಮಾಡಲಾಗಿದೆ.

ಅ.24ರಂದು ದೀಪಾವಳಿ ಆಚರಣೆ, ಅ.25ರಂದು ಸೂರ್ಯಗ್ರಹಣ ಮತ್ತು ನವೆಂಬರ್ 8ರಂದು ಚಂದ್ರಗ್ರಹಣದಿಂದಾಗಿ ಮೂರು ದಿನಗಳ ಭಕ್ತರಿಗೆ ಶ್ರೀವೆಂಕಟೇಶ್ವರ ಸ್ವಾಮಿ ದರ್ಶನ ಇರುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನ ಪ್ರಕಟಿಸಿವೆ.

ಸೂರ್ಯ ಮತ್ತು ಚಂದ್ರಗ್ರಹಣದ ದಿನದಂದು ದೇವಸ್ಥಾನದ ಬಾಗಿಲುಗಳನ್ನು ಬೆಳಗ್ಗೆ 8.00 ರಿಂದ ಸಂಜೆ 7.30ರ ವರೆಗೆ ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ.

ಹಾಗೆಯೇ ದೀಪಾವಳಿ ದಿನವೂ ದೇವರ ದರ್ಶನ ರದ್ದುಗೊಳಿಸಿದ್ದರಿಂದ ಅ.23ರಂದು ಯಾವುದೇ ಶಿಫಾರಸು ಪತ್ರಗಳನ್ನೂ ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದೆ.