Friday, 13th December 2024

ಜರ್ಮನಿ-ಭಾರತದ ನಡುವೆ ಇಂದಿನಿಂದ ತಡೆ ರಹಿತ ವಿಮಾನ ಸಂಚಾರ

ನವದೆಹಲಿ: ಕರೋನಾ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಾವಳಿ ತಗ್ಗಿದ ಬೆನ್ನಲ್ಲೇ ಜರ್ಮನಿ ಮತ್ತು ಭಾರತದ ನಡುವೆ ಲುಫ್ತಾನ್ಸಾ ವಿಮಾನಗಳ ತಡೆ ರಹಿತ ಸಂಚಾರ ಬುಧವಾರ ಪುನಾರಂಭಗೊಂಡಿದೆ.

ಜರ್ಮನಿ ಹಾಗೂ ಭಾರತದ ನಡುವೆ ಏರ್ ಬಬಲ್ ಅಡಿಯಲ್ಲಿ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ದೆಹಲಿ ಮತ್ತು ಫ್ರಾಂಕ್ ಫರ್ಟ್ ನಡುವೆ ವಾರದಲ್ಲಿ ನಾಲ್ಕು ಬಾರಿ 10 ವಿಮಾನಗಳು ಸಂಚರಿಸಲಿವೆ. ಮುಂಬೈಗೆ 3, ಬೆಂಗಳೂರು 3 ವಿಮಾನಗಳು ಸಂಚರಿಸಲಿವೆ. ಈ ನಡುವೆ ಗಲ್ಫ್ ರಾಷ್ಟ್ರಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಅವಕಾಶ ನೀಡದ ಹಿನ್ನೆಲೆ ಪ್ರಯಾಣದ ಸಮಯದಲ್ಲಿ 3 ಗಂಟೆ ಕಡಿಮೆಯಾಗಿಲಿದೆ.

ಮೊದಲ ಹಂತದಲ್ಲಿ ಫ್ರಾಂಕ್ ಫರ್ಟ್ ನಿಂದ ಗಲ್ಭ್ ವರೆಗೆ ವಿಮಾನಗಳು ಸಂಚರಿಸಲಿದ್ದು, 2ನೇ ಹಂತದಲ್ಲಿ ಗಲ್ಭ್ ನಿಂದ ದೆಹಲಿ, ಮುಂಬೈ, ಬೆಂಗಳೂರಿನತ್ತ ವಿಮಾನಗಳು ಸಂಚರಿಸುತ್ತಿದ್ದವು. ಮೂರನೇ ಹಂತದಲ್ಲಿ ಇದೇ ರೀತಿಯಾಗಿ ಜರ್ಮನಿಗೆ ವಿಮಾನಗಳು ಹಾರುತ್ತಿದ್ದವು.

ಭಾರತ ಮತ್ತು ಜರ್ಮನಿ ನಡುವೆ ಸಂಚರಿಸುವ ಲುಫ್ತಾನ್ಸಾ ವಿಮಾನಗಳು ಸಾಮಾನ್ಯವಾಗಿ ಕಾರ್ಯಾಚರಣೆ ನಡೆಸಲಿವೆ. ವಿಮಾನದ ಸಿಬ್ಬಂದಿ ಬದಲಾವಣೆಗೆ ಮಧ್ಯದಲ್ಲಿ ಯಾವುದೇ ನಿಲ್ದಾಣಗಳು ಇರುವುದಿಲ್ಲ. ಫ್ರಾಂಕ್ ಫರ್ಟ್ ನಿಂದ ಹೊರಟ ವಿಮಾನ ನೇರವಾಗಿ ಭಾರತದಲ್ಲಿ ನಿಗದಿಗೊಳಿಸಿರುವ ದೆಹಲಿ, ಮುಂಬೈ ಅಥವಾ ಬೆಂಗಳೂರು ನಗರದವರೆಗೂ ಸಂಚರಿಸಲಿದೆ.