ನವದೆಹಲಿ: ಕೊವಿಡ್ 19 ಲಸಿಕೆಗಳಿಂದ ಆಗುವ ದುಷ್ಪರಿಣಾಮಗಳಿಗೆ ಸರ್ಕಾರವನ್ನು ಹೊಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡಿವಿಟ್ ಸಲ್ಲಿಸಿದೆ.
ಸಾಂಕ್ರಾಮಿಕದ ವಿರುದ್ಧ ಭಾರತದಲ್ಲಿ ನಾಗರಿಕರಿಗೆ ಪ್ರಮುಖವಾಗಿ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ರೋಗ ನಿಯಂತ್ರಣಕ್ಕೆ ನೀಡುವ ಲಸಿಕೆಗಳು ಹೃದಯಾಘಾತ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇವು ದೇಹಕ್ಕೆ ಉಂಟು ಮಾಡಿದ ದುಷ್ಪರಿಣಾಮದಿಂದ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಕಳೆದ ವರ್ಷ ಇಬ್ಬರು ಯುವತಿಯರು ಕೊವಿಡ್ 19 ಲಸಿಕೆ ತೆಗೆದುಕೊಂಡ ಕೆಲ ದಿನಗಳ ನಂತರ ಮೃತಪಟ್ಟಿದ್ದರು. ಆ ಇಬ್ಬರು ಯುವತಿಯರ ತಂದೆ-ತಾಯಿ (ಬೇರೆಬೇರೆ ಪ್ರಕರಣ ಇದು) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ‘ಕೊವಿಡ್ 19 ನಿಯಂತ್ರಣ ಲಸಿಕೆ ಬಳಿಕವೇ ಸಾವು ಸಂಭವಿಸಿದೆ. ಈ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು.
ಲಸಿಕೆ ತೆಗೆದುಕೊಂಡ ಬಳಿಕ ಅದರಿಂದ ದೇಹದ ಮೇಲೆ ಏನಾದರೂ ದುಷ್ಪರಿಣಾಮ ಆಗುತ್ತಿದ್ದರೆ, ಅದನ್ನು ಆದಷ್ಟು ಬೇಗ ಪತ್ತೆ ಮಾಡಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡುವ ಸಂಬಂಧ ಪ್ರೊಟೊಕಾಲ್ ಸಿದ್ಧಪಡಿಸಲು ಪರಿಣತ ವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿ ರಚಿಸಬೇಕು. ಅಷ್ಟೇ ಅಲ್ಲ, ಸಾವಿಗೆ ಸರ್ಕಾರಗಳು ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದ್ದರು.
ಅರ್ಜಿಗಳ ವಿಚಾರಣೆ ಕೈಗತ್ತಿಕೊಂಡಿರುವ ಸುಪ್ರೀಂಕೋರ್ಟ್, ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ.
‘ಇದುವರೆಗೆ ಲಸಿಕೆಯಿಂದಾದ ದುಷ್ಪರಿಣಾಮದಿಂದ ಆದ ಮರಣ ಒಂದು ಮಾತ್ರ ಎಂದು ರಾಷ್ಟ್ರೀಯ ಎಇಎಫ್ಐ ಸಮಿತಿ ತಿಳಿಸಿದೆ. ಯುವತಿಯರ ಸಾವಿನ ಬಗ್ಗೆ ನಮ್ಮ ಸಂತಾಪವಿದೆ. ಆದರೆ ಇದು ಲಸಿಕೆಯಿಂದ ಆಗಿದ್ದಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.