ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ವಿಮಾನ ಅಪಘಾತವು ಭಾರತೀಯ ನಿಗದಿತ ವಿಮಾನವಲ್ಲ. ಇದು ಮೊರೊಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ.
ಇದು ಭಾರತೀಯ ವಿಮಾನವಲ್ಲ ಎಂದು ಡಿಜಿಸಿಎ ಅಧಿಕಾರಿ ದೃಢಪಡಿಸಿದ್ದಾರೆ.
ಬಡಾಕ್ಷನ್ ಪ್ರಾಂತ್ಯದ ಕುರಾನ್-ಮುಂಜನ್ ಮತ್ತು ಜಿಬಕ್ ಜಿಲ್ಲೆಗಳ ಜೊತೆಗೆ ಟೋಪ್ಖಾನಾ ಪರ್ವತಗಳಲ್ಲಿ ಅಪಘಾತಕ್ಕೀಡಾದ ವಿಮಾನವು ಮೊರೊಕನ್ ನೋಂದಾಯಿತ ಡಿಎಫ್ 10 ವಿಮಾನವಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಉತ್ತರ ಅಫ್ಘಾನಿಸ್ತಾನದ ಬಡಾಕ್ಷನ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ವಿಮಾನ ಅಪಘಾತಕ್ಕೀಡಾಗಿದೆ. ದೂರದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೊರೊಕನ್ ನೋಂದಾಯಿತ ಡಿಸಿ 10 ವಿಮಾನವು ಬಡಾಕ್ಷನ್ ಪ್ರಾಂತ್ಯದ ಕುರಾನ್-ಮುಂಜನ್ ಮತ್ತು ಜಿಬಕ್ ಜಿಲ್ಲೆಗಳ ಜೊತೆಗೆ ಟೋಪ್ಖಾನಾ ಪರ್ವತ ಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.