Monday, 14th October 2024

ಭಾರತ್ ಜೋಡೋ ಯಾತ್ರೆಯಿಂದ ತಾಳ್ಮೆ ಹೆಚ್ಚಿದೆ: ರಾಹುಲ್ ಗಾಂಧಿ

ಇಂದೋರ್: ಭಾರತ್ ಜೋಡೋ ಯಾತ್ರೆಯಿಂದ ಹೆಚ್ಚಿನ ತಾಳ್ಮೆ ಮತ್ತು ಇತರರ ಮಾತನ್ನು ಕೇಳುವ ಸಾಮರ್ಥ್ಯ ಸೇರಿದಂತೆ ತನ್ನಲ್ಲಿ ಕೆಲವು ಬದಲಾವಣೆಗಳಾಗಿವೆ ಎಂದು ಯಾತ್ರೆ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿ ದ್ದಾರೆ.
ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಈಗ ಮಧ್ಯ ಪ್ರದೇಶ ಪ್ರವೇಶಿಸಿದ್ದು, ಕಾಂಗ್ರೆಸ್ ನ ಮಹತ್ವಾಕಾಂಕ್ಷೆಯ ಈ ಯಾತ್ರೆ ಈಗ 2,000 ಕಿ.ಮೀ ಗಿಂತಲೂ ಹೆಚ್ಚು ದೂರ ಕ್ರಮಿಸಿದೆ.
ಈಗ ಯಾರಾದರೂ ನನ್ನನ್ನು ತಳ್ಳಿದರೆ ಅಥವಾ ಎಳೆದಾಡಿದರೆ ನಾನು ಈಗ ಕಿರಿಕಿರಿ ಅಂತ ಭಾವಿಸುವುದಿಲ್ಲ. ಅದು ನನ್ನ ಮೇಲೆ ಈಗ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಈ ಮೊದಲು ತಳ್ಳಾಟ, ನೂಕಾಟದಿಂದ ನನಗೆ ಬಹಳ ಕಿರಿಕಿರಿಯಾಗುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಇತರರ ಸಮಸ್ಯೆಗಳನ್ನು ಕೇಳುವ ಸಾಮರ್ಥ್ಯವೂ ಈಗ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.