ಮುಂಬೈ: ಷೇರುಪೇಟೆ ಹೂಡಿಕೆದಾರರ ರಾಕೇಜ್ ಜುಂಜುನ್ವಾಲಾ ಬೆಂಬಲಿತ ನಜಾರಾ ಟೆಕ್ನಾಲಜೀಸ್ ಷೇರು ಮಂಗಳವಾರ ಮುಂಬೈ ಷೇರು ಮಾರುಕಟ್ಟೆಯಲ್ಲಿ ಶೇ 81 ರಷ್ಟು ಪ್ರೀಮಿಯಂನೊಂದಿಗೆ ಗರಿಷ್ಠ 2,026 ರೂ.ವರೆಗೆ ಏರಿಕೆ ಗೊಂಡರೆ, ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ)ನಲ್ಲಿ ಗರಿಷ್ಠ 2,024 ರೂಪಾಯಿವರೆಗೆ ಜಿಗಿದಿದೆ.
ಆನ್ಲೈನ್ ಗೇಮಿಂಗ್ ಕಂಪನಿ ನಜಾರಾ ಟೆಕ್ನಾಲಜೀಸ್ನ 1100 ರಿಂದ 1101 ರೂ. ಪ್ರೈಸ್ ಬ್ಯಾಂಡ್ನೊಂದಿಗೆ 583 ಕೋಟಿ ರೂ. ಗುರಿಯನ್ನು ಹೊಂದಿತ್ತು. ನಜಾರಾ ಟೆಕ್ನಾಲಜೀಸ್ ಪ್ರಮುಖ ಹೂಡಿಕೆದಾರರಿಂದ ಪ್ರತಿ ಷೇರಿಗೆ 1101 ದರದಲ್ಲಿ 262 ಕೋಟಿ ರೂ. ಹೊಂದಿದ್ದರೆ, ಸೆಪ್ಟೆಂಬರ್ 2020 ರ ತ್ರೈಮಾಸಿಕದ ವೇಳೆಗೆ ರಾಕೇಜ್ ಜುಂಜುನ್ವಾಲಾ ಅವರು ನಜಾರಾ ಟೆಕ್ನಾಲಜೀಸ್ನಲ್ಲಿ ಶೇ 11.51 ರಷ್ಟು ಪಾಲನ್ನು ಹೊಂದಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ