Friday, 13th December 2024

ಭಾರತೀಯರು ರುಚಿಗೆ ಬದಲು ಪೌಷ್ಠಿಕಾಂಶಕ್ಕೆ ಆದ್ಯತೆ, ಇವರ ಸಂಖ್ಯೆ ಜಾಗತಿಕ ಸರಾಸರಿಯನ್ನು ಮೀರಿಸುತ್ತದೆ

83% ನಗರವಾಸಿ ಗ್ರಾಹಕರು ಆಹಾರವನ್ನು ಖರೀದಿಸುವ ಮೊದಲು ಪೌಷ್ಟಿಕಾಂಶದ ಲೇಬಲ್‌ಗಳನ್ನು ಓದುತ್ತಾರೆ; ಇದು ಭಾರತದಲ್ಲಿ ಆರೋಗ್ಯಕರವಾದುದನ್ನು ತಿನ್ನುವ ಪ್ರವೃತ್ತಿಯ ಬಗ್ಗೆ ಎತ್ತಿ ತೋರುತ್ತದೆ

ವಿಶ್ವದ ಅತಿದೊಡ್ಡ ಪಿಸ್ತಾ ಬೆಳೆಗಾರ ಮತ್ತು ಪಿಸ್ತಾ ಸಂಸ್ಕಾರಕ ಮತ್ತು ಭಾರತದಲ್ಲಿ ಕ್ಯಾಲಿಫೋರ್ನಿಯ ಪಿಸ್ತಾಗಳ ವಿತರಕ ವಂಡರ್ಫುಲ್ ಪಿಸ್ತಾ, ವಿಶ್ವ ಪೌಷ್ಟಿಕಾಂಶ ದಿನವಾದ ಇಂದು, ನಗರ ಭಾರತೀಯರ ತಿಂಡಿ ಅಭ್ಯಾಸಗಳ ಮೇಲೆ ಬೆಳಕು ಚೆಲ್ಲುವ ಹೊಸ ಜಾಗತಿಕ ಅಧ್ಯಯನದ ಶೋಧಗಳನ್ನು ಬಿಡುಗಡೆ ಮಾಡಿದೆ. ಪ್ರಮುಖ ಜಾಗತಿಕ ಸಂಶೋಧನಾ ಸಲಹಾ ಸಂಸ್ಥೆಯಾದ ಮೆಟೀರಿಯಲ್‌ನೊಂದಿಗೆ ನಡೆಸಲಾಗಿದ್ದ ಈ ಅಧ್ಯಯನವು 10 ದೇಶಗಳು ಮತ್ತು 12,400 ಕ್ಕೂ ಹೆಚ್ಚು ಪ್ರತಿಸ್ಪಂದಕರನ್ನು ಒಳಗೊಂಡಿತ್ತು. ಈ ಅಧ್ಯಯನ ಹೊಸ ನಡವಳಿಕೆಯ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಅದೇನೆಂದರೆ, ನಗರ ಭಾರತೀಯ ಗ್ರಾಹಕರು ತಿಂಡಿಯ ವಿಷಯದಲ್ಲಿ ರುಚಿಗಿಂತ ಪೌಷ್ಟಿಕತೆಗೆ ಆದ್ಯತೆ ನೀಡುತ್ತಾರೆ. ಆರೋಗ್ಯಕರ ತಿಂಡಿಗಳ ಬಗ್ಗೆ ಹೆಚ್ಚುತ್ತಿರುವ ಒಲವು ಒಟ್ಟಾರೆ ಯೋಗಕ್ಷೇಮಕ್ಕಾಗಿ ಉತ್ತಮ ಪೋಷಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ವಿಶೇಷವಾಗಿ ಭಾರತದ ಮಾರುಕಟ್ಟೆಗೆ ಈ ಅಧ್ಯಯನವು ಆರು ಭಾರತೀಯ ನಗರಗಳಲ್ಲಿ 2,415 ಶಾಪರ್‌ಗಳ ತಿಂಡಿ ಅಭ್ಯಾಸಗಳನ್ನು ಪರಿಶೀಲಿಸಿದೆ. ಇದು ಸರಿಸುಮಾರು 35.9 ಮಿಲಿಯನ್ ಗ್ರಾಹಕ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಗಮನಾರ್ಹವಾಗಿ, ಬಹುಪಾಲು ನಗರವಾಸಿ ಭಾರತೀಯರು (58%) ತಾವು ಆಹಾರ ಪದಾರ್ಥಗಳನ್ನು ಖರೀದಿಸುವಾಗ ರುಚಿಗಿಂತ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಗಮನಕೊಡುವುದಾಗಿ ವರದಿ ಮಾಡಿದ್ದಾರೆ. ಇದು ಜಾಗತಿಕ ಸರಾಸರಿ 52% ಅನ್ನು ಮೀರಿದೆ. ದೆಹಲಿ ಮತ್ತು ಅಹಮದಾಬಾದ್ ಉಳಿದ ನಗರಗಳಿಗಿಂತ ಮುಂದಿವೆ; ಇಲ್ಲಿ 60% ಗೂ ಹೆಚ್ಚು ನಗರ ಶಾಪರ್ ಗಳು ಆಹಾರದಲ್ಲಿರುವ ಪೌಷ್ಠಿಕಾಂಶಗಳಿಗೆ ಆದ್ಯತೆ ನೀಡುತ್ತಾರೆ. ಬೆಂಗಳೂರು ಮತ್ತು ಚೆನ್ನೈ ನಿಕಟವಾಗಿ ನಂತರದ ಸ್ಥಾನಗಳಲ್ಲಿವೆ. ಇದು ಸ್ಮಾರ್ಟ್ ತಿಂಡಿ ಆದ್ಯತೆಗಳ ಕಡೆಗಿನ ರಾಷ್ಟ್ರವ್ಯಾಪಿ ಬದಲಾವಣೆಯನ್ನು ಸೂಚಿಸುತ್ತದೆ. ಭಾರತದಲ್ಲಿ, ಮಿಲೇನಿಯಲ್ಸ್ ಮತ್ತು ಜನರಲ್ ಜೆಡ್ (2000 ಸಹಸ್ರಮಾನದಲ್ಲಿ ಹುಟ್ಟಿದವರು) ವರ್ಗದವರು ಆರೋಗ್ಯ-ಪ್ರಜ್ಞೆಯ ಖರೀದಿ ನಿರ್ಧಾರಗಳಲ್ಲಿ ಪ್ರಮುಖರಾಗಿದ್ದಾರೆ, ಈ ವಯಸ್ಸಿನ 83% ಕ್ಕಿಂತ ಹೆಚ್ಚು ಗ್ರಾಹಕರು, ಆಹಾರ ಪದಾರ್ಥಗಳನ್ನು ಖರೀದಿಸುವ ಮೊದಲು ಪೌಷ್ಟಿಕಾಂಶದ ವಿವರಗಳನ್ನು ಓದುತ್ತಾರೆ.

ಭಾರತೀಯ ಗ್ರಾಹಕರು ಪೌಷ್ಟಿಕಾಂಶದ ತಿಂಡಿಗಳಿಗಾಗಿ ಶಾಪಿಂಗ್ ಮಾಡುವಾಗ ನಾಲ್ಕು ಪ್ರಮುಖ ಅಂಶಗಳಿಗೆ ಆದ್ಯತೆ ನೀಡುತ್ತಾರೆ: ನೈಸರ್ಗಿಕ (ಕೃತಕ ಬಣ್ಣಗಳು ಮತ್ತು ಸಂರಕ್ಷಕಗಳಿಂದ ಮುಕ್ತ), ಹೃದಯ-ಆರೋಗ್ಯಕರ, ಪ್ರೊಟೀನ್-ಸಮೃದ್ಧ ಮತ್ತು ಶಕ್ತಿಯ ಆಕರ. 10 ರಲ್ಲಿ ಒಂಬತ್ತು ಮಂದಿ ನಗರ ಶಾಪರ್‌ಗಳು ಪ್ರಜ್ಞಾಪೂರ್ವಕವಾಗಿ ಪ್ರೊಟೀನ್-ಭರಿತ ಆಹಾರಗಳನ್ನು ಹುಡುಕುತ್ತಾರೆ. ಇದು ಜಾಗತಿಕ ಸರಾಸರಿ 10 ರಲ್ಲಿ ಏಳಕ್ಕಿಂತ ಉತ್ತಮವಾಗಿದೆ. ಪೌಷ್ಠಿಕಾಂಶದ ಮೇಲಿನ ಗಮನದಿಂದಾಗಿ ಬೀಜಗಳು ಆದ್ಯತೆಯ ಲಘು ಆಹಾರವಾಗುತ್ತಿದೆ. ಇದು ನಿತ್ಯದ ಆಹಾರದ ಅವಶ್ಯ ಭಾಗವಾಗುತ್ತಿದೆ. ಅಧ್ಯಯನವು ಭಾರಿ ಪ್ರಮಾಣದಲ್ಲಿ ಬೀಜಗಳ ಸೇವನೆಯಾಗುತ್ತಿದೆ ಎಂದು ಕಂಡುಹಿಡಿದಿದೆ – 86% ಭಾರತೀಯ ಶಾಪರ್ ಗಳು 6 ತಿಂಗಳ ಅವಧಿಯಲ್ಲಿ ಅವುಗಳನ್ನು ತಾವು ಖರೀದಿಸಿರುವುದಾಗಿ ವರದಿ ಮಾಡಿದ್ದಾರೆ; ಜಾಗತಿಕ ಸರಾಸರಿ ಕೇವಲ 75%. ಪ್ರತಿ 28 ಗ್ರಾಂ ಬೀಜಗಳಲ್ಲಿ 6 ಗ್ರಾಂ ಪ್ರೋಟೀನ್‌ ಇರುತ್ತದೆ. ಹಾಗಾಗಿ ಕ್ಯಾಲಿಫೋರ್ನಿಯ ಪಿಸ್ತಾಗಳು ಸ್ಮಾರ್ಟ್ ಸ್ನ್ಯಾಕ್ ಆಯ್ಕೆಯಾಗಿವೆ. ಅದು ರುಚಿಕರವೂ ಹೌದು ಆರೋಗ್ಯಕ್ಕೆ ಒಳ್ಳೆಯದೂ ಹೌದು.

ವಂಡರ್‌ಫುಲ್ ಪಿಸ್ತಾಸ್‌ ನ ಭಾರತದ ನಿರ್ದೇಶಕರಾದ ಶೈಲ್ ಪಾಂಚೋಲಿ ಅವರು ಅಧ್ಯಯನದ ಕುರಿತು ಹೀಗೆ ಪ್ರತಿಕ್ರಿಯಿಸಿದರು: “ಮೊದಲೆಲ್ಲ ಬೀಜಗಳನ್ನು ಆಹಾರದ ಮೇಲೆ ಅಲಂಕಾರವಾಗಿ ಮತ್ತು ಹಬ್ಬಗಳ ಸಮಯದಲ್ಲಿ ಮಾತ್ರ ಸೇವಿಸಲಾಗುತ್ತಿತ್ತು. ಆದರೆ, ಈಗ ಭಾರತದಲ್ಲಿ ಬೀಜಗಳು ಜನಪ್ರಿಯ ತಿಂಡಿಯಾಗಿ ಮಾರ್ಪಟ್ಟಿವೆ. ಇದು ಆಹಾರ ಪದ್ಧತಿಯಲ್ಲಿನ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಭಾರತದಲ್ಲಿ ಪಿಸ್ತಾ ಸೇವನೆ ಕಳೆದ ಆರು ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಕಾರಣ, ಪಿಸ್ತಾ ನೀಡುವ ಪೌಷ್ಟಿಕಾಂಶದ ಪ್ರಯೋಜನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಬೆಳೆದಿದೆ. ಪಿಸ್ತಾಗಳು ನೈಸರ್ಗಿಕವಾಗಿ ಕೊಲೆಸ್ಟ್ರಾಲ್-ಮುಕ್ತ, ಸಸ್ಯಾಧಾರಿತ ಪ್ರೊಟೀನ್ ಯುಕ್ತ ಮತ್ತು ತಿನ್ನುವ ನಾರಿನಂಶ ಸಮೃದ್ಧವಾಗಿವೆ. ಮತ್ತು 30 ಕ್ಕೂ ಹೆಚ್ಚು ವಿಭಿನ್ನ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ ಎಂಬುದನ್ನು ಗ್ರಾಹಕರು ಅರಿತಿದ್ದಾರೆ.”

ಸ್ವಾರಸ್ಯವೆಂದರೆ, ನಗರವಾಸಿ ಭಾರತೀಯ ಗ್ರಾಹಕರಲ್ಲಿ ಬೀಜಗಳು ಎರಡನೇ ಅತ್ಯಂತ ಆದ್ಯತೆಯ ತಿಂಡಿಯಾಗಿದೆ ಎಂದು ಅಧ್ಯಯನವು ಹೇಳುತ್ತದೆ. 64% ಬೇಬಿ ಬೂಮರ್‌ಗಳು ಮತ್ತು 59% ಜೆನ್ ಜೆಡ್ (Gen Z) ಗಳು ಆಹಾರವನ್ನು ಆಯ್ಕೆಮಾಡುವಾಗ ರುಚಿಗಿಂತ ಪೌಷ್ಟಿಕತೆಗೆ ಆದ್ಯತೆ ನೀಡುತ್ತಾರೆ. ಇದು ತಲೆಮಾರುಗಳಾದ್ಯಂತ ಆರೋಗ್ಯದ ಮೇಲೆ ಹೆಚ್ಚುತ್ತಿರುವ ಗಮನವನ್ನು ಸೂಚಿಸುತ್ತದೆ, ಬೇಬಿ ಬೂಮರ್‌ಗಳು (60+ ವಯಸ್ಸಿನವರು) ಮತ್ತು ಜೆನ್ ಝೆಡ್ ಪೀಳಿಗೆಯವರು ಇಬ್ಬರೂ ಈಗ ಆರೋಗ್ಯದತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಹಾಗಾಗಿ ಬೀಜಗಳ ಖರೀದಿ ಪ್ರಮಾಣ ಏರುತ್ತಿದೆ. ಕಾಲದ ಎರಡು ವಿರುದ್ಧ ತುದಿಗಳಲ್ಲಿರುವ ಈ ಎರಡು ತಲೆಮಾರುಗಳು ಪ್ರೊಟೀನ್-ಭರಿತ ಆಯ್ಕೆಗಳನ್ನು ಹುಡುಕುವಲ್ಲಿ ಮುಂದಾಗಿದ್ದಾರೆ. ಜೊತೆಗೆ ನೈಸರ್ಗಿಕ ತಿಂಡಿಗಳಿಗೆ ಆದ್ಯತೆ ನೀಡುತ್ತಾರೆ.

ತಿಂಡಿಯ ಆಯ್ಕೆಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿದೆ. ಇಲ್ಲಿನ ನಿವಾಸಿಗಳು ನೈಸರ್ಗಿಕ ಪದಾರ್ಥಗಳನ್ನು ಆರಿಸಿಕೊಳ್ಳುತ್ತಾರೆ (35%; ರಾಷ್ಟ್ರೀಯ ಸರಾಸರಿ 30%), ಹೃದಯಕ್ಕೆ-ಆರೋಗ್ಯಕರ (33% ವಿರುದ್ಧ 30%), ಮತ್ತು ಪ್ರೊಟೀನ್ ಯುಕ್ತ (33% ವಿರುದ್ಧ 29%). ಚೆನ್ನೈ ನಿವಾಸಿಗಳು ಶಕ್ತಿ-ಹೆಚ್ಚಿಸುವ ತಿಂಡಿಗಳನ್ನು ಹುಡುಕುತ್ತಾರೆ (31%; ರಾಷ್ಟ್ರೀಯ ಸರಾಸರಿ 29%).

ಸಮೀಕ್ಷೆಯಲ್ಲಿ ಭಾಗವಹಿಸಿದ್ದ ನಗರವಾಸಿ ಭಾರತೀಯರಲ್ಲಿ 69%, ಸಸ್ಯಾಧಾರಿತ ಪ್ರೊಟೀನ್, ಮಾಂಸಾಹಾರ ಪ್ರೋಟೀನ್‌ ನಂತೆಯೇ ಉತ್ತಮವಾಗಿದೆ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಇದು, ವಿಭಿನ್ನ ಆಹಾರದ ಆದ್ಯತೆಗಳತ್ತ ಧನಾತ್ಮಕ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಪಿಸ್ತಾಗಳು ಎಲ್ಲ ಒಂಬತ್ತು ಅತ್ಯಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಉತ್ತಮ ಗುಣಮಟ್ಟದ ಸಂಪೂರ್ಣ ಪ್ರೊಟೀನ್‌ನ ಉತ್ತಮ ಮೂಲವಾಗಿದೆ. 28 ಗ್ರಾಂ ಪಿಸ್ತಾ 6 ಗ್ರಾಂ ಪ್ರೊಟೀನ್ ಒದಗಿಸುತ್ತದೆ. ಇದು, ಎಫ್‌ಎಸ್‌ಎಸ್‌ಎಐ ಶಿಫಾರಸು ಮಾಡಿರುವ ದೈನಂದಿನ ಪ್ರೊಟೀನ್ ಅವಶ್ಯಕತೆಯ (ಆರ್‌ಡಿಎ) 11% ನಷ್ಟು.

ವಂಡರ್‌ಫುಲ್ ಪಿಸ್ತಾ ಅಧ್ಯಯನ ಭಾರತೀಯ ತಿಂಡಿ ಪದ್ಧತಿಯಲ್ಲಿ ಆಗಿರುವ ಬಲವಾದ ಬದಲಾವಣೆಯನ್ನು ಅನಾವರಣಗೊಳಿಸಿದೆ. ಹಬ್ಬದ ಔತಣದಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಬೀಜಗಳು ಈಗ ದೈನಂದಿನ ಲಘು ಆಹಾರವಾಗಿ ವಿಕಸನಗೊಳ್ಳುತ್ತಿವೆ. ಕಾರಣ, ಪೌಷ್ಟಿಕಾಂಶದ ಬಗ್ಗೆ ಇರುವ ರಾಷ್ಟ್ರವ್ಯಾಪಿ ಆದ್ಯತೆ. ಈ ಪ್ರವೃತ್ತಿಗೆ ವಯೋಮಾನತ ಅಡ್ದಿಯಿಲ್ಲ. ಜೆನ್ ಜೆಡ್ ಅಥವಾ ಬೇಬಿ ಬೂಮರ್‌ ಕಾಲದವರಿರಲಿ ಎಲ್ಲರಿಗೂ ಸಮಾನವಾಗಿ ಪ್ರಿಯವಾಗಿದೆ. ನಗರವಾಸಿ ಭಾರತೀಯರಲ್ಲಿ ಜಾಗರೂಕ ಆಹಾರ ಸೇವನೆಯ ಬಗೆಗೆ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಗ್ರಾಹಕರು ಹೆಚ್ಚು ನೈಸರ್ಗಿಕ, ಹೃದಯಕ್ಕೆ-ಆರೋಗ್ಯಕರ, ಪ್ರೊಟೀನ್-ಸಮೃದ್ಧ ಮತ್ತು ಶಕ್ತಿ-ಉತ್ತೇಜಿಸುವ ತಿಂಡಿಗಳನ್ನು ಅರಸುತ್ತಿರುವುದರಿಂದ, ಭವಿಷ್ಯದಲ್ಲಿ ಭಾರತೀಯ ತಿಂಡಿಗಳು ಇನ್ನೂ ಪೌಷ್ಟಿಕ ಮತ್ತು ಯೋಗಕ್ಷೇಮಕ್ಕೆ ಹಿತಕರವಾಗಿರುವುದರಲ್ಲಿ ಯಾವುದೇ ಸಂಶಯವಿಲ್ಲ.