Sunday, 6th October 2024

ವಾಹನ ಉತ್ಪಾದನಾ ಕಂಪನಿ ಓಲಾದಿಂದ 200 ಜನರ ವಜಾ

ವದೆಹಲಿ: ರೈಡ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಉತ್ಪಾದನಾ ಕಂಪನಿ ಓಲಾ ಸುಮಾರು 200 ಜನರನ್ನು ತಂಡದಿಂದ ವಜಾಗೊಳಿಸಿದೆ.

ಕಳೆದ ವಾರ ಕಂಪನಿಯಿಂದ ವಜಾಗೊಂಡ ಉದ್ಯೋಗಿ ನೀಡಿದ ಸಂದರ್ಶನದಲ್ಲಿ, ‘ಈ ವಾರ ಸುಮಾರು 200 ಜನರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಇತರ ಅವಕಾಶಗಳನ್ನು ಹುಡುಕುತ್ತಿದ್ದೇನೆ’ ಎಂದು ಹೇಳಿದ್ದಾರೆ

ಓಲಾ ಕ್ಯಾಬ್ಸ್, ರೈಡ್ ಹೈಲಿಂಗ್ ಬಿಸಿನೆಸ್ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಓಲಾ ಎಲೆಕ್ಟ್ರಿಕ್ ನಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.