Saturday, 14th December 2024

ಕಾರ್ಗಿಲ್‌ಗೆ ಒಮರ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲಾಯನ್ಸ್ ನಿಯೋಗ ಭೇಟಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಪೀಪಲ್ಸ್ ಅಲಾಯನ್ಸ್ ನಿಯೋಗ ಕಾರ್ಗಿಲ್‌ಗೆ ಶುಕ್ರವಾರ ಭೇಟಿ ನೀಡಿದೆ. ನಿಯೋಗ ಬೇಸಿಗೆ ರಾಜಧಾನಿ ಶ್ರೀನಗರದಿಂದ ಹೊರಟು ಕಾರ್ಗಿಲ್‌ಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಆಗಸ್ಟ್ 5 ರಂದು 370 ಮತ್ತು 35 ಎ ನೇ ವಿಧಿಗಳನ್ನು ರದ್ದುಗೊಳಿಸಿದ ನಂತರ ಕಾರ್ಗಿಲ್‍ ಗೆ ಭೇಟಿ ನೀಡುತ್ತಿರುವ ಕಾಶ್ಮೀರದ  ಮುಖ್ಯವಾಹಿನಿಯ ರಾಜಕೀಯ ನಾಯಕರ ನಿಯೋಗ ಇದಾಗಿದೆ. ಕಾರ್ಗಿಲ್‍ನಲ್ಲಿ ಜನರು ಹಿಂದಿನ ರಾಜ್ಯವನ್ನು ವಿಭಜನೆಗೆ ವಿರೋಧಿಸಿದ್ದಾರೆ. ರಾಜ್ಯವನ್ನು ಪುನರ್ ಸ್ಥಾಪನೆಗೆ ಒತ್ತಾಯಿಸಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶದ ಬದಲಿಗೆ ಜಮ್ಮು-ಕಾಶ್ಮೀರದ ಭಾಗವಾಗಿರಲು ಮುಂದಾಗಿದ್ದಾರೆ.