Wednesday, 11th December 2024

ಬಿಲ್‌ ಪಾಸ್ ಮಾಡಲು 1.80 ಲಕ್ಷ ರೂ. ಲಂಚ: ಓರ್ವನ ಬಂಧನ

ನವದೆಹಲಿ: ಗುತ್ತಿಗೆದಾರರ 89.55 ಲಕ್ಷ ರೂಪಾಯಿ ಬಿಲ್‌ ಪಾಸ್ ಮಾಡಲು 1.80 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಸಹಾಯಕ ವಿಭಾಗೀಯ ಇಂಜಿನಿಯರ್‌ ನನ್ನು ಸಿಬಿಐ ಬಂಧಿಸಿದೆ.

ನಾಗ್ಪುರದಲ್ಲಿ ನಿಯೋಜನೆಗೊಂಡಿರುವ ಕೇಂದ್ರ ರೈಲ್ವೆಯ ಸಹಾಯಕ ವಿಭಾಗೀಯ ಇಂಜಿನಿಯರ್(ದಕ್ಷಿಣ) ಎಬಿ ಚತುರ್ವೇದಿ ಅವರು ಬಾಕಿಯಿರುವ ಬಿಲ್ ಮೊತ್ತ 89.55 ಲಕ್ಷ ರೂ.ಗಳ ಶೇ.ಎರಡರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿನ ಮೇರೆಗೆ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಹೇಳಿದ್ದಾರೆ.

ದೂರುದಾರರಿಂದ 1.80 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಬಿಐ ರೆಡ್ ಹ್ಯಾಂಡ್ ಆಗಿ ರೈಲ್ವೆ ಇಂಜಿನಿಯರ್ ನನ್ನು ಹಿಡಿದಿದೆ ಎನ್ನಲಾಗಿದೆ.

ಆರೋಪಿ ಮನೆಯಲ್ಲಿ ಶೋಧ ನಡೆಸಲಾಗಿದ್ದು, ಸುಮಾರು 60.62 ಲಕ್ಷ ರೂಪಾಯಿ ನಗದು ಮತ್ತು ಇತರೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.