Saturday, 14th December 2024

ಮುನ್ನೂರು ರುಪಾಯಿ ಸರ ಖರೀದಿಸಲು ಹೋಗಿ 1 ಲಕ್ಷ ರೂ. ಪಂಗನಾಮ

ನವದೆಹಲಿ: ಮುನ್ನೂರು ರುಪಾಯಿ ಮೌಲ್ಯದ ಸರ ಖರೀದಿಸಲು(ಆನ್‌ಲೈನ್‌ನಲ್ಲಿ)  ಯತ್ನಿಸಿದ ಯುವತಿ ಯೊಬ್ಬಳು ಸೈಬರ್‌ ವಂಚಕ ಬಲೆಗೆ ಬಿದ್ದು 1 ಲಕ್ಷ ಕಳೆದುಕೊಂಡಿದ್ದಾಳೆ. ದೆಹಲಿ ನಿವಾಸಿ ಮೋಸಕ್ಕೊಳಗಾಗಿದ್ದು, ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ನಲ್ಲಿ ಸರ ಖರೀದಿಗೆ ಯತ್ನಿಸಿ ಪಂಗನಾಮ ಹಾಕಿಸಿ ಕೊಂಡಿದ್ದಾರೆ.

ವೆಬ್‌ಸೈಟ್‌ನಲ್ಲಿ ಸರವನ್ನು ಬುಕ್‌ ಮಾಡಿದ ಸಂತ್ರಸ್ತೆ, ತನ್ನ ಮೊಬೈಲ್‌ ನಂಬರ್‌ ಮತ್ತು ವಿಳಾಸ ನಮೂದು ಮಾಡಿದ್ದರು. ಇದಾದ ಮೇಲೆ ಅಪರಿಚಿತ ವ್ಯಕ್ತಿ, ಕರೆ ಮಾಡಿ ನಿಮ್ಮ ಬುಕ್ಕಿಂಗ್‌ ಸರಿಯಿಲ್ಲ. ಅದಕ್ಕಾಗಿ ನಿಮ್ಮ ಹಣವನ್ನು ಆನ್‌ಲೈನ್‌ ಮೂಲಕ ಮರಳಿಸಲಾಗುತ್ತದೆ.

ಬ್ಯಾಂಕ್‌ ಖಾತೆ ಲಿಂಕ್‌ ಆಗಿರುವ ಮೊಬೈಲ್‌ ನಂಬರ್‌ ತಿಳಿಸುವಂತೆ ಸೂಚಿಸಿದ್ದ. ಇದನ್ನು ನಂಬಿದ ಆಕೆ, ತಮ್ಮ ನಂಬರ್‌ ಕೊಟ್ಟಿದ್ದಾರೆ. ಅದಕ್ಕೆ ಸೈಬರ್‌ ಕಳ್ಳರು ಲಿಂಕ್‌ ಕಳುಹಿಸಿದ್ದಾನೆ. ನಂತರ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ ಮೊದಲು .5 ರು. ವರ್ಗಾವಣೆ ಮಾಡಿ. ಬ್ಯಾಂಕ್‌ ಖಾತೆ ಖಚಿತವಾದ ಕೂಡಲೇ .305 ರು. ವರ್ಗಾವಣೆ ಮಾಡುತ್ತೇವೆ ಎಂದಿದ್ದಾನೆ. ಅಂತೆಯೇ ಯುವತಿ, ತನ್ನ ಮೊಬೈಲ್‌ಗೆ ಬಂದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ .5 ವರ್ಗಾವಣೆ ಮಾಡಿದ್ದಾರೆ.

ಕೆಲವೇ ಕ್ಷಣದಲ್ಲಿ ದುಷ್ಕರ್ಮಿ, ಯುವತಿ ಬ್ಯಾಂಕ್‌ ಖಾತೆಯಿಂದ 1 ಲಕ್ಷ ದೋಚಿದ್ದಾನೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ.