Monday, 14th October 2024

ಖಂಡಿಪೋರಾ ಎನ್‌ಕೌಂಟರ್‌: ಒಬ್ಬ ಭಯೋತ್ಪಾದಕನ ಹತ್ಯೆ

ಶ್ರೀನಗರ : ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಖಂಡಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ ನಲ್ಲಿ ನಿಷೇಧಿತ ಭಯೋ ತ್ಪಾದಕ ಸಂಘಟನೆ ಹಿಜ್ಬುಲ್-ಮುಜಾಹಿದ್ದೀನ್ ಒಬ್ಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.

ಶನಿವಾರ ನಸುಕಿನ ವೇಳೆ ಖಂಡಿಪೋರಾ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆ ದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ 1 ಭಯೋತ್ಪಾದಕನ ಹತ್ಯೆಯಾಗಿದೆ.

ಶುಕ್ರವಾರ ಕಾಶ್ಮೀರದಲ್ಲಿ ಮೂರು ಕಡೆ ನಡೆಸಿದ ಕಾರ್ಯಾಚರಣೆಗಳಲ್ಲಿ ಇಬ್ಬರು ಸಕ್ರಿಯ ಉಗ್ರರು ಮತ್ತು ಮೂವರು ‘ಹೈಬ್ರಿಡ್ ಭಯೋತ್ಪಾದಕರು’ ಸೇರಿದಂತೆ ಆರು ಮಂದಿಯನ್ನು ಭದ್ರತಾ ಪಡೆಗಳು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.