Saturday, 14th December 2024

ಜಾರ್ಖಂಡ್’ನಲ್ಲಿ ಒಂದು ವಾರ ಲಾಕ್ ಡೌನ್

ರಾಂಚಿ: ಕರೋನಾ ವೈರಸ್ ನಿಯಂತ್ರಿಸಲು ರಾಜ್ಯದಲ್ಲಿ ಒಂದು ವಾರ ಸಂಪೂರ್ಣ ಲಾಕ್ ಡೌನ್ ಮಾಡುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಗಳವಾರ ಘೋಷಿಸಿದರು

ಏ.22 ರಂದು ಬೆಳಗ್ಗೆ 6 ರಿಂದ ಏ.29 ರಂದು ಸಂಜೆ 6 ಗಂಟೆಯ ರವರೆಗೆ ಲಾಕ್ ಡೌನ್ ಜಾರಿಯಾಗಲಿದೆ. ಪರಿಸ್ಥಿತಿ ಗಮನಿಸಿದ ನಂತರ ಲಾಕ್ ಡೌನ್ ಮತ್ತಷ್ಟು ದಿನ ವಿಸ್ತರಿಸುವ ಸಾಧ್ಯತೆ ಇದೆ.

ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು ಸೇರಿದಂತೆ ಇತರೆ ಎಲ್ಲಾ ಖಾಸಗಿ ಕಚೇರಿಗಳನ್ನು ಸಹ ಬಂದ್ ಮಾಡಲಾಗು ತ್ತಿದೆ. ಅಗತ್ಯ ವಸ್ತುಗಳ ಮಾರಾಟ ಮಾಡುವುದನ್ನು ಹೊರತುಪಡಿಸಿ ಇತರೆ ಎಲ್ಲಾ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಬಂದ್ ಮಾಡಲಾಗು ವುದು ಎಂದು ಸಿಎಂ ಸೊರೆನ್ ತಿಳಿಸಿದ್ದಾರೆ.