Saturday, 14th December 2024

ಜಿಎಸ್ಟಿಗೆ ಪೆಟ್ರೋಲ್, ಡೀಸೆಲ್ ಸೇರ್ಪಡೆಗೆ ರಾಜ್ಯಗಳ ವಿರೋಧ

ನವದೆಹಲಿ : ಕಬ್ಬಿಣ, ಮ್ಯಾಂಗನೀಸ್, ತಾಮ್ರ, ನಿಕ್ಕಲ್, ಕೋಬಾಲ್ಟ್, ಅಲ್ಯೂಮಿನಿಯಂ, ಸೀಸ, ಸತು, ತವರು, ಕ್ರೋಮಿಯಂ – ಅದಿರುಗಳು ಮತ್ತು ಸಾಂದ್ರತೆ ಗಳ ಮೇಲೆ ಜಿಎಸ್ಟಿ ದರವನ್ನು ಶೇ.5ರಿಂದ ಶೇ.18ಕ್ಕೆ ಹೆಚ್ಚಿಸಲು ಜಿಎಸ್ಟಿ ಮಂಡಳಿ ಅನುಮೋದನೆ ನೀಡಿದೆ.

ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಜಿಎಸ್ಟಿ ಕೌನ್ಸಿಲಿಂಗ್ ಸಭೆ ನಡೆಯಿತು. ಸಭೆಯಲ್ಲಿ ಜಿಎಸ್ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರ್ಪಡೆ ಕುರಿತು ಮಾತುಕತೆ ಪ್ರಾರಂಭಿಸುವುದನ್ನು ಎಲ್ಲಾ ರಾಜ್ಯಗಳು ಸರ್ವಾನುಮತದಿಂದ ವಿರೋಧಿಸಿದವು. ಜಿಎಸ್ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸೇರ್ಪಡೆ ಬಗ್ಗೆ ಚರ್ಚೆಯನ್ನು ಪರಿಗಣಿಸಲು ಇದು ವೇದಿಕೆಯಲ್ಲ ಎಂದು ಕೌನ್ಸಿಲ್ ಸರ್ವಾನುಮತದಿಂದ ಭಾವಿಸಿತು.

ಬಳಿಕ ಕಬ್ಬಿಣ, ಮ್ಯಾಂಗನೀಸ್, ತಾಮ್ರ, ನಿಕ್ಕಲ್, ಕೋಬಾಲ್ಟ್, ಅಲ್ಯೂಮಿನಿಯಂ, ಸೀಸ, ಸತು, ತವರು, ಕ್ರೋಮಿಯಂ – ಅದಿರುಗಳು ಮತ್ತು ಸಾಂದ್ರತೆಗಳ ಮೇಲೆ ಜಿಎಸ್ಟಿ ದರವನ್ನು ಶೇ.5ರಿಂದ ಶೇ.18ಕ್ಕೆ ಹೆಚ್ಚಿಸಲು ಮಂಡಳಿ ಅನುಮೋದನೆ ನೀಡಿತು.