Wednesday, 9th October 2024

ಆಮ್ ಆದ್ಮಿಗೆ ಇತರೆ ಪಕ್ಷದ ನಾಯಕರ ಸೇರ್ಪಡೆ

ನವದೆಹಲಿ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್ ಜಯಭೇರಿ ಬಾರಿಸಿತ್ತು. ಅದರ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಆಪ್ ಗೆ ಸೇರುತ್ತಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ಹರಿಯಾಣಾದ ಹಲವು ಮಂದಿ ಬಿಜೆಪಿ, ಕಾಂಗ್ರೆಸ್ ನಾಯಕರು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ.

ಮಾಜಿ ಬಿಜೆಪಿ ಶಾಸಕ ಉಮೇಶ್ ಅಗರ್ವಾಲ್, ಮಾಜಿ ಸಚಿವ ಕಾಂಗ್ರೆಸ್ ನ ಬಿಜೇಂದ್ರ ಸಿಂಗ್ ಅಲ್ಲದೆ ಬಲ್ಬೀರ್ ಸಿಂಗ್ ಆಪ್ ಸೇರಿ ಕೊಂಡರು. ದೇಶದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಪಂಜಾಬ್ ಜನರು ಹೇಗೆ ಆಪ್ ಪಕ್ಷವನ್ನು ಗೆಲ್ಲಿಸಿದ್ದಾರೋ ಅದೇ ಬದಲಾವಣೆಯನ್ನು ಹರಿಯಾಣ ಕೂಡಾ ಬಯಸುತ್ತಿದೆ ಎಂದು ನಾಯಕರು ಹೇಳಿದ್ದಾರೆ.

ಹಿರಿಯ ನಾಯಕರು ಆಪ್ ಸೇರ್ಪಡೆ ಕಾರ್ಯಕ್ರಮದಲ್ಲಿ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಉಪಸ್ಥಿತರಿದ್ದರು.