Saturday, 14th December 2024

ನಮ್ಮ ಸಿದ್ಧಾಂತ ವಿಭಿನ್ನ. ಆದರೆ, ನಾವಿಬ್ಬರು ಶತ್ರುಗಳಲ್ಲ: ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಸಂಸದ ಸಂಜಯ್ ರಾವತ್ ಭೇಟಿ ಬಗ್ಗೆ ಸ್ವತಃ ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಮ್ಮ ಸಿದ್ಧಾಂತ ವಿಭಿನ್ನ. ಆದರೆ, ನಾವಿಬ್ಬರು ಶತ್ರುಗಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಲು ನಿನ್ನೆ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದೆ. ಫಡ್ನವೀಸ್ ಮಾಜಿ ಮುಖ್ಯಮಂತ್ರಿ ಗಳಾಗಿದ್ದಾರೆ. ನನ್ನ ಹಾಗೂ ಫಡ್ನವೀಸ್ ನಡುವೆ ಸಿದ್ಧಾಂತಗಳ ಕುರಿತು ವ್ಯತ್ಯಾಸಗಳಿವೆ. ಆದರೆ, ನಾವಿಬ್ಬರೂ ಶತ್ರುಗಳೇನೂ ಅಲ್ಲ. ಫಡ್ನವೀಸ್ ಅವರನ್ನು ಭೇಟಿಯಾಗಿದ್ದರ ಕುರಿತು ರಾಜ್ಯ ಮುಖ್ಯಮಂತ್ರಿಗಳಿಗೂ ಮಾಹಿತಿ ಇದೆ ಎಂದು ಸ್ಪಷ್ಟನೆ ನೀಡಿ ದ್ದಾರೆ.

ಎನ್’ಡಿಎ ಮೈತ್ರಿಯಿಂದ ಹೊರಬಂದ ಬಳಿಕ ಬಿಜೆಪಿಯ ಕಟು ಟೀಕಾಕಾರ ಶಿವಸೇನೆ ಸಂಸದ ಸಂಜಯ್ ರಾವತ್ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀನ್ ಅವರು ಶನಿವಾರ ಪರಸ್ಪರ ಭೇಟಿಯಾಗಿರುವುದು ಭಾರೀ ಊಹಾಪೋಹಾ ಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾವತ್, ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಲು ನಿನ್ನೆ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದೆ. ಫಡ್ನವೀಸ್ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಬಿಹಾರ ರಾಜ್ಯ ಬಿಜೆಪಿ ಚುನಾವಣಾ ಉಸ್ತು ವಾರಿ ಜವಾಬ್ದಾರಿ ಪಡೆದುಕೊಂಡಿದ್ದಾರೆ. ಫಡ್ನವೀಸ್ ಅವರನ್ನು ಭೇಟಿಯಾಗಿದ್ದರ ಕುರಿತು ರಾಜ್ಯ ಮುಖ್ಯಮಂತ್ರಿಗಳಿಗೂ ಮಾಹಿತಿ ಎಂದು ಸ್ಪಷ್ಟನೆ ನೀಡಿದ್ದಾರೆ.