ನವದೆಹಲಿ: ಸುದೀರ್ಘ ರಜೆ(33 ದಿನ) ಬಳಿಕ ಕರ್ತವ್ಯಕ್ಕೆ ಹಾಜರಾದ ಔಟ್‌ಲುಕ್ ನಿಯತಕಾಲಿಕದ ಪ್ರಧಾನ ಸಂಪಾದಕ ರೂಬೆನ್ ಬ್ಯಾನರ್ಜಿಯವರನ್ನು, ಕರ್ತವ್ಯಕ್ಕೆ ಮರಳಿದ 2 ಗಂಟೆಗಳಲ್ಲೇ ವಜಾ ಮಾಡಲಾಗಿದೆ.
ಮುಂದಿನ ವಾರದ ಮುಖಪುಟ ವರದಿಯಾಗಿ ‘ಅಬ್ಬಾ ಜಾನ್ ಮತ್ತು ಆದಿತ್ಯನಾಥ್’ ವರದಿ ಪ್ರಕಟಿಸುವಂತೆ ಹಿರಿಯ ಸಂಪಾದಕರಿಗೆ ಸೂಚನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮುಖ್ಯ ಕಾರ್ಯನಿರ್ವಾಹಕ ಇಂದ್ರನಿಲ್ ರಾಯ್ ಅವರು ಬ್ಯಾನರ್ಜಿಯವರ ಉದ್ಯೋಗ ಗುತ್ತಿಗೆ ರದ್ದುಪಡಿಸುವ ಸ್ವಲ್ಪ ಸಮಯ ಮೊದಲು ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕ ಸುನೀಲ್ ಮೆನನ್ ಕೂಡಾ ರಾಜೀನಾಮೆ ನೀಡಿದರು. ಸೋಮವಾರ ಕಂಪೆನಿ ಚಿಂಕಿ ಸಿನ್ಹಾ ಅವರನ್ನು ಸಂಪಾದಕ ರನ್ನಾಗಿ ನೇಮಕ ಮಾಡಿತ್ತು.
ಯಾವುದೇ ಪೂರ್ವ ಮಾಹಿತಿ ಇಲ್ಲದೇ ತಮ್ಮನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಬ್ಯಾನರ್ಜಿ ಹೇಳಿದರು. ಬ್ಯಾನರ್ಜಿ ಆ.12ರಿಂದ ರಜೆಯಲ್ಲಿದ್ದರು.
ನಿಯತಕಾಲಿಕದಲ್ಲಿ ಪ್ರಕಟವಾಗುವ ವಿಷಯಗಳ ಬಗ್ಗೆ ಔಟ್‌ಲುಕ್ ಆಡಳಿತ ಮಂಡಳಿ ಮತ್ತು ತಮ್ಮ ಮಧ್ಯೆ ಅಭಿಪ್ರಾಯ ಭೇದ ಇರುವುದನ್ನು ಒಪ್ಪಿಕೊಂಡರು.