Sunday, 13th October 2024

ರಾಜ್ಯ ಸಭೆಯ ಸೆಕ್ರೆಟರಿ-ಜನರಲ್‌ ಆಗಿ ಪಿ.ಸಿ.ಮೋದಿ ಅಧಿಕಾರ ಸ್ವೀಕಾರ

ನವದೆಹಲಿ: ರಾಜ್ಯ ಸಭೆಯ ಸೆಕ್ರೆಟರಿ-ಜನರಲ್‌ ಆಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯ ನಿವೃತ್ತ ಮುಖ್ಯಸ್ಥ ಪಿ.ಸಿ.ಮೋದಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮೋದಿ ಅವರನ್ನು ಹುದ್ದೆಗೆ ನೇಮಕ ಮಾಡಿ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಆದೇಶ ಹೊರಡಿಸಿದ್ದರು. ಹಾಲಿ ಸೆಕ್ರೆಟರಿ ಜನರಲ್‌ ಪಿ.ಪಿ.ಕೆ.ರಾಮಾಚಾರ್ಯಲು ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.

ನ.29ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಶುರುವಾಗಲಿರುವಂತೆಯೇ ಈ ನೇಮಕ ನಡೆದಿದೆ. ಮೋದಿ ಅವರು ನ.12ರಿಂದ 2022ರ ಆ.10ರ ವರೆಗೆ ಹುದ್ದೆಯಲ್ಲಿ ಇರಲಿದ್ದಾರೆ. 1982ನೇ ಸಾಲಿನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿಯಾಗಿ ಪ್ರಮೋದ್‌ ಚಂದ್ರ ಮೋದಿ (ಪಿ.ಸಿ) ಸಿಬಿಡಿಟಿ ಮುಖ್ಯಸ್ಥರಾಗಿ ನಿವೃತ್ತಿಯಾಗಿದ್ದಾರೆ.