Saturday, 14th December 2024

ಒಲಿಂಪಿಕ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪಿ.ಟಿ.ಉಷಾ ಆಯ್ಕೆ

ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹಿರಿಯ ಕ್ರೀಡಾ ಪಟು ಪಿ. ಟಿ. ಉಷಾ(58) ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ.

ಈ ಮೂಲಕ ಉಷಾ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಅಂತಾರಾಷ್ಟ್ರೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿದ್ದಾರೆ.

ಡಿ.10ರಂದು ಸಂಸ್ಥೆಯ ಚುನಾವಣೆ ನಡೆಯಲಿದ್ದು ಉಷಾ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದರು ಮತ್ತು ಇತರರು ಬೇರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಕಾರಣ ಉಷಾ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.