Friday, 13th December 2024

ಪದ್ಮವಿಭೂಷಣ ಪುರಸ್ಕೃತ ಮೌಲಾನಾ ವಹಿದುದ್ದೀನ್‌ ಖಾನ್ ಇನ್ನಿಲ್ಲ

ನವದೆಹಲಿ: ಹಿರಿಯ ಇಸ್ಲಾಮಿಕ್‌ ವಿದ್ವಾಂಸ, ಪದ್ಮವಿಭೂಷಣ ಪುರಸ್ಕೃತ ಮೌಲಾನಾ ವಹಿದುದ್ದೀನ್‌ ಖಾನ್ ‌(96) ಬುಧವಾರ ರಾತ್ರಿ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಕೋವಿಡ್‌ ದೃಢಪಟ್ಟಿತ್ತು.

ಕಳೆದ ಜನವರಿಯಲ್ಲಿ ಕೇಂದ್ರ ಸರ್ಕಾರ, ಅವರಿಗೆ ಪದ್ಮವಿಭೂಷಣ ಪುರಸ್ಕಾರ ಪ್ರಕಟಿಸಿತ್ತು. 2000ನೇ ಇಸವಿಯಲ್ಲಿ ಅವರು ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದರು.

ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಅವರು ಮೌಲಾನಾ ಅವರ ಕೊಡುಗೆಯನ್ನು ಸ್ಮರಿಸಿ ಟ್ವೀಟ್‌ ಮಾಡಿದ್ದಾರೆ.