Friday, 13th December 2024

PAN Card New Rule: ಪಾನ್ ಕಾರ್ಡ್ ಅಪ್‌ಡೇಟ್‌ಗೆ ಯಾವಾಗ ಕೊನೆಯ ದಿನ? ಮಾಡದಿದ್ದರೆ ಆಗುವ ನಷ್ಟ ಏನು?

PAN Card New Rule

ಪಾನ್ ಕಾರ್ಡ್‌ಗೆ (PAN Card New Rule) ಸಂಬಂಧಿಸಿ ಕೇಂದ್ರ ಸರ್ಕಾರ ದೇಶಾದ್ಯಂತ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಈ ಬಗ್ಗೆ ಗಮನಿಸದೇ ಹೋದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮುಂದೆ ಎದುರಾಗಬಹುದಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಪಾನ್ ಕಾರ್ಡ್ (Pan card) ಹೊಂದಿರುವವರು ತಮ್ಮ ಕಾರ್ಡ್‌ ಅನ್ನು ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ ನವೀಕರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಆಧಾರ್‌ನಂತೆಯೇ (Aadhaar card) ಪ್ಯಾನ್ ಕಾರ್ಡ್‌ ಕೂಡ ಭಾರತೀಯ ನಾಗರಿಕರಿಗೆ ಅತ್ಯಗತ್ಯ ದಾಖಲೆಯಾಗಿದೆ. ಶಾಶ್ವತ ಖಾತೆ ಸಂಖ್ಯೆಯಾಗಿರುವ (Permanent Account Number) ಪಾನ್ ಕಾರ್ಡ್ ವಿಶೇಷ ವಹಿವಾಟುಗಳಿಗೆ, ಹಣಕಾಸು ಮತ್ತು ಕಾನೂನು ಪ್ರಕ್ರಿಯೆಗೆ ಬೇಕಾದ ಅತ್ಯಗತ್ಯ ದಾಖಲೆಯಾಗಿದೆ.

ಸರ್ಕಾರವು ಪಾನ್ ಕಾರ್ಡ್ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ಬಗ್ಗೆ ಪಾನ್ ಕಾರ್ಡ್ ಹೊಂದಿರುವವರು ತಿಳಿದುಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯು ಇದೀಗ ಪಾನ್ ಕಾರ್ಡ್‌ಗೆ ಸಂಬಂಧಿಸಿ ಹೊಸ ನಿಯಮವನ್ನು ಹೊರಡಿಸಿದೆ. ಇದು ಎಲ್ಲರೂ ಅನುಸರಿಸಬೇಕಾದ ಬಹಳ ಮುಖ್ಯ ನಿಯಮವಾಗಿದೆ.

PAN Card New Rule

ಏನಿದು ಹೊಸ ನಿಯಮ?

ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್‌ನೊಂದಿಗೆ ಅದನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಮಾಡದೇ ಇದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಈಗಿನಂತೆ ಆಧಾರ್ ಮತ್ತು ಪಾನ್ ಕಾರ್ಡ್‌ಗಳನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಡಿಸೆಂಬರ್ 31. ಗಡುವಿನೊಳಗೆ ಆಧಾರ್ ಕಾರ್ಡ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೆ ಮತ್ತು ಈ ಕುರಿತಾದ ನಿಯಮಗಳನ್ನು ಅನುಸರಿಸದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಬಳಿಕ ಅದನ್ನು ಸಕ್ರಿಯಗೊಳಿಸಲು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಏಕೆ ಲಿಂಕ್ ಮಾಡಬೇಕು?

ಪಾನ್ ಮತ್ತು ಆಧಾರ್ ಲಿಂಕ್ ಮಾಡುವ ಮುಖ್ಯ ಉದ್ದೇಶ ಹಣಕಾಸು ವಹಿವಾಟಿನಲ್ಲಿ ಪಾರದರ್ಶಕತೆಯನ್ನು ತರುವುದಾಗಿದೆ. ಇದರಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಅವರ ಎಲ್ಲಾ ಚಟುವಟಿಕೆಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಯಾರು ಎಷ್ಟು ಕಪ್ಪುಹಣ ಹೊಂದಿದ್ದಾರೆ, ಎಷ್ಟು ತೆರಿಗೆ ವಂಚಿಸುತ್ತಾರೆ? ಎನ್ನುವುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿದ ಅನಂತರ ಸರ್ಕಾರವು ಎಲ್ಲಾ ಜನರ ಎಲ್ಲಾ ರೀತಿಯ ವೈಯಕ್ತಿಕ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು.

ಹೇಗೆ ಲಿಂಕ್ ಮಾಡುವುದು?

ಆಧಾರ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಸುಲಭ ವಿಧಾನ ಇಲ್ಲಿದೆ. ಇದಕ್ಕಾಗಿ ಆದಾಯ ತೆರಿಗೆ ಇ-ಫೈಲಿಂಗ್ ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ www.incometax.gov.in ಅನ್ನು ತೆರೆದು ಅದರಲ್ಲಿ ‘ಲಿಂಕ್ ಆಧಾರ್’ ವಿಭಾಗವನ್ನು ಹುಡುಕಿ ಅದನ್ನು ಆಯ್ಕೆ ಮಾಡಿ. ಇದನ್ನು ‘ತ್ವರಿತ ಲಿಂಕ್‌ಗಳು’ ವಿಭಾಗದ ಅಡಿಯಲ್ಲಿ ಕಾಣಬಹುದು. ಇಲ್ಲಿ ನಿಮ್ಮ ಪಾನ್ ಮತ್ತು ಆಧಾರ್ ವಿವರಗಳನ್ನು ನಮೂದಿಸಿ. 10 ಅಂಕೆಯ ಪಾನ್ ಸಂಖ್ಯೆ ಮತ್ತು 12 ಅಂಕೆಯ ಆಧಾರ್ ಸಂಖ್ಯೆಯನ್ನು ಹಾಕಿ. ಬಳಿಕ ಹೆಸರು ಮತ್ತು ವಿವರಗಳನ್ನು ಧೃಡೀಕರಿಸಿ ಪರಿಶೀಲಿಸಿ.

ಪಾನ್ ಮತ್ತು ಆಧಾರ್ ಕಾರ್ಡ್‌ಗಳೆರಡರಲ್ಲೂ ನಿಮ್ಮ ಹೆಸರು ಸರಿಯಾಗಿದೆಯೇ ಅವು ಹೊಂದಿಕೆಯಾಗುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವ್ಯತ್ಯಾಸವಿದ್ದಲ್ಲಿ ಲಿಂಕ್ ಮಾಡುವ ಮೊದಲು ಡಾಕ್ಯುಮೆಂಟ್‌ಗಳಲ್ಲಿ ಒಂದರ ಮಾಹಿತಿಯನ್ನು ನವೀಕರಿಸಬೇಕಾಗಬಹುದು.

ಆಧಾರ್‌ನಲ್ಲಿ ಜನ್ಮ ವರ್ಷ ಮಾತ್ರ ಕಾಣಿಸಿಕೊಂಡರೆ ಈ ಮಾಹಿತಿಯನ್ನು ದೃಢೀಕರಿಸುವ ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಿ. ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ. ದೃಷ್ಟಿ ದೋಷವಿದ್ದಲ್ಲಿ ಒಟಿಪಿ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅನಂತರ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ‘ಲಿಂಕ್ ಆಧಾರ್’ ಬಟನ್ ಅನ್ನು ಕ್ಲಿಕ್ ಮಾಡಿ.

ಇದರೊಂದಿಗೆ ನಿಮ್ಮ ಆಧಾರ್ ಮತ್ತು ಪಾನ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದಕ್ಕೆ ದೃಢೀಕರಣ ಸಂದೇಶ ಪರದೆಯ ಮೇಲೆ ಕಾಣಿಸುತ್ತದೆ. ಲಿಂಕ್ ಮಾಡುವುದು ವಿಫಲವಾದರೆ ದೋಷ ಸಂದೇಶವು ಗೋಚರಿಸುತ್ತದೆ. ಬಳಿಕ ಏನು ಸರಿಪಡಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ಸಿಗುತ್ತದೆ. ಅದರಂತೆ ಮಾಡಿ.

PAN Card New Rule

ಗಮನಿಸಬೇಕಾದ ಮುಖ್ಯ ಸಂಗತಿ

ಸರ್ಕಾರವು ನಿರ್ದಿಷ್ಟಪಡಿಸಿದ ಗಡುವಿನೊಳಗೆ ಪಾನ್ ಮತ್ತು ಆಧಾರ್‌ ಲಿಂಕ್ ಮಾಡಿಕೊಳ್ಳಿ. ವಿಳಂಬದಿಂದ ಉಂಟಾಗುವ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಿ.

Stock Market: ಟ್ರಂಪ್‌ ಜಯಭೇರಿ ಬೆನ್ನಲ್ಲೇ ಷೇರುಪೇಟೆಯಲ್ಲಿ ಸಂಚಲನ; ಸೆನ್ಸೆಕ್ಸ್‌ನಲ್ಲಿ 1,000 ಪಾಯಿಂಟ್ಸ್ ಜಂಪ್‌

ಮೊದಲು ಎರಡೂ ದಾಖಲೆಗಳಲ್ಲೂ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗ ಮಾಹಿತಿಯನ್ನು ಖಚಿತಪಡಿಸಿಕೊಳ್ಳಿ.

ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ಹತ್ತಿರದ ಪಾನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಆದಾಯ ತೆರಿಗೆ ಸಹಾಯವಾಣಿಯನ್ನು ಸಂಪರ್ಕಿಸಬಹುದು.