Wednesday, 11th December 2024

ಟ್ವಿಟರ್ ನೂತನ ಸಿಇಓ ಆಗಿ ಪರಾಗ್ ಅಗರ್ವಾಲ್

ನವದೆಹಲಿ: ಟ್ವಿಟರ್ ಇಂಕ್ ನೂತನ ಸಿಇಓ ಆಗಿ ಪರಾಗ್ ಅಗರ್ವಾಲ್ ಅಧಿಕಾರ ವಹಿಸಿಕೊಳ್ಳ ಲಿದ್ದಾರೆ.

ಈ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡಾರ್ಸೆ ತಮ್ಮ ಸ್ಥಾನದಿಂದ ಕೆಳಗಿಳಿ ದಿದ್ದಾರೆ. ಭಾರತೀಯ ಮೂಲದ ತಂತ್ರಜ್ಞಾನ ಕಾರ್ಯನಿರ್ವಾಹಕ ಪರಾಗ್ ಅಗರ್ವಾಲ್ ಅವರು ಜಾಗತಿಕ ವ್ಯವಹಾರಗಳಲ್ಲಿ ಮುಂಚೂಣಿಯಲ್ಲಿರುವ ಭಾರತ ಮೂಲದ ವ್ಯಕ್ತಿಗಳ ಸುದೀರ್ಘ ಪಟ್ಟಿಯನ್ನ ಪ್ರವೇಶಿಸಿದ್ದಾರೆ.

ನಿಮ್ಮ ನಿರಂತರ ಮಾರ್ಗದರ್ಶಕತ್ವ ಮತ್ತು ನಿಮ್ಮ ಸ್ನೇಹಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನೀವು ನಿರ್ಮಿಸಿದ ಸಂಸ್ಕೃತಿ ಮತ್ತು ಉದ್ದೇಶಕ್ಕಾಗಿ, ಸಲ್ಲಿಸಿದ ಸೇವೆ ಗಾಗಿ ಮತ್ತು ನಿಜವಾಗಿಯೂ ಮಹತ್ವದ ಸವಾಲುಗಳ ಮೂಲಕ ಕಂಪನಿಯನ್ನ ಮುನ್ನಡೆಸಿದ್ದ ಕ್ಕಾಗಿ ನಾನು ಆಭಾರಿಯಾಗಿದ್ದೇನೆ’ ಎಂದು ಡಾರ್ಸೆಗೆ ನೀಡಿದ ಸಂದೇಶದಲ್ಲಿ ಬರೆದಿದ್ದಾರೆ.