Friday, 13th December 2024

ಸಂಸತ್ತಿನ ಎರಡನೇ ಬಜೆಟ್ ಸಭೆ ನಾಳೆಯಿಂದ ಆರಂಭ

ನವದೆಹಲಿ: ಸಂಸತ್ತಿನ ಎರಡನೇ ಬಜೆಟ್ ಸಭೆ ಸೋಮವಾರದಿಂದ ಆರಂಭವಾಗಲಿದ್ದು, ಏಪ್ರಿಲ್ 6 ರವರೆಗೆ ನಡೆಯಲಿದೆ. ಈ ಸಭೆಗಳಲ್ಲಿ ಕೇಂದ್ರ ಬಜೆಟ್ ಅನುಮೋದನೆ ಹಾಗೂ ಅನುದಾನದ ಕುರಿತು ಚರ್ಚೆ ನಡೆಯಲಿದೆ. ಅದೇ ರೀತಿ ಮಹತ್ವದ ವಿಧೇಯಕಗಳು ಅನುಮೋದನೆಗಾಗಿ ಸಂಸತ್ ಮುಂದೆ ಬರಲಿವೆ.

ಪ್ರಸ್ತುತ ಸಂಸತ್ತಿನ ಉಭಯ ಸದನಗಳಲ್ಲಿ 35 ಮಸೂದೆಗಳು ಬಾಕಿ ಇವೆ. ಈ ಪೈಕಿ 26 ಮಸೂದೆಗಳು ರಾಜ್ಯಸಭೆ ಯಲ್ಲಿ ಮತ್ತು ಒಂಬತ್ತು ಮಸೂದೆಗಳು ಲೋಕಸಭೆಯಲ್ಲಿ ಬಾಕಿ ಉಳಿದಿವೆ.

ಜೀವವೈವಿಧ್ಯ (ತಿದ್ದುಪಡಿ) ಮಸೂದೆ – 2021, ವೈಯಕ್ತಿಕ ದತ್ತಾಂಶಗಳ ರಕ್ಷಣೆ ಮಸೂದೆ, ಅಂತರ-ರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆ- 2019, ಪರಿಶಿಷ್ಟ ಪಂಗಡಗಳ ಮೂರನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ-2022, ಪರಿಶಿಷ್ಟ ಪಂಗಡಗಳ ಐದನೇ ಸಾಂವಿಧಾನಿಕ ಪರಿಷತ್ತು, ತಮಿಳು ನಾಡು 202ಜಿ. ರದ್ದತಿ) ಮಸೂದೆ, ಸಂಸತ್ತಿನ ಅಸೆಂಬ್ಲಿ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯ ಮರು ಸಂಘಟನೆ (ಮೂರನೇ) ಮಸೂದೆ – 2013, ದೆಹಲಿ ಟೆನೆನ್ಸಿ (ನಿರ್ಮೂಲನೆ) ಮಸೂದೆ, ಪರಿಶಿಷ್ಟ ಪಂಗಡಗಳ ಸಂವಿಧಾನ ತಿದ್ದುಪಡಿ ಮಸೂದೆ 2019, ಉದ್ಯೋಗ ವಿನಿಮಯ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ತಿದ್ದುಪಡಿ ಮಸೂದೆ ಬಾಕಿ ಉಳಿದಿವೆ.