ಅರ್ಜಿದಾರರು(ತಾಯಿ) ಮಗುವನ್ನು ಹುಟ್ಟುವ ಮೊದಲು ಪತಿಯನ್ನು ತೊರೆದು ಮಗು ವನ್ನು ಒಂಟಿಯಾಗಿ ಬೆಳೆಸಲಾಗಿದೆ ಎಂದು ಹೇಳಲಾಗಿದೆ.
ತಂದೆ ಕುಟುಂಬವನ್ನು ತೊರೆದಿದ್ದರೆ ಪಾಸ್ಪೋರ್ಟ್ ನಿಂದ ಅವರ ಹೆಸರನ್ನು ತೆಗೆದುಹಾಕ ಬಹುದು ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಏ. 19 ರಂದು ಮಹಿಳೆ ಒಬ್ಬರು ಅಪ್ರಾಪ್ತ ಮಗನ ಪಾಸ್ಪೋರ್ಟ್ ನಿಂದ ತಂದೆಯ ಹೆಸರು ತೆಗೆದು ಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ತಾನು ಸಿಂಗಲ್ ಪೇರೆಂಟ್ ಆಗಿದ್ದು, ಮಗು ಜನಿಸುವ ಮೊದಲೇ ಗಂಡನಿಂದ ದೂರ ವಾಗಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ವಿಚ್ಛೇದನ ಒಪ್ಪಂದದ ಪ್ರಕಾರ ಮಗುವಿನ ತಂದೆಗೆ ಯಾವುದೇ ಭೇಟಿಯ ಹಕ್ಕು ಗಳಿಲ್ಲ. ಮಕ್ಕಳಿಗೆ ಯಾವುದೇ ಜೀವನಾಂಶ ಕೂಡ ಕೊಡುತ್ತಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಪಾಸ್‌ಪೋರ್ಟ್ ಕೈಪಿಡಿ ಮತ್ತು ಪ್ರತಿವಾದಿಗಳು ಅವಲಂಬಿಸಿರುವ OM ಎರಡೂ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್‌ಗಳನ್ನು ವಿವಿಧ ಸಂದರ್ಭಗಳಲ್ಲಿ ನೀಡಬಹುದು ಎಂದು ಗುರುತಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.