Friday, 13th December 2024

ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ

ವದೆಹಲಿ: ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾ.15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆ ಮತ್ತು ಫಾಸ್ಟ್ ಟ್ಯಾಗ್ ಸೇರಿದಂತೆ ವಿವಿಧ ವ್ಯಾಲೆಟ್ ಗಳಲ್ಲಿ ಹಣವಿದ್ದರೆ ಅದು ಖಾಲಿಯಾಗುವವರೆಗೆ ಬಳಸ ಬಹುದು.

ಆದರೆ, ಮತ್ತೆ ರಿಚಾರ್ಜ್ ಮಾಡಲು ಅವಕಾಶ ಇರುವುದಿಲ್ಲ. ಫೆಬ್ರವರಿ 29ರಂದೇ ತನ್ನ ಎಲ್ಲಾ ಸೇವೆ ನಿಲ್ಲಿಸುವಂತೆ ಆರ್‌ಬಿಐ ಆದೇಶ ನೀಡಿ ನಂತರ ಮಾ.14ರವರೆಗೂ ವಿಸ್ತರಿಸಿದೆ.

ಕೆವೈಸಿ ಅಕ್ರಮ ಕಾರಣ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆಗಳು ಮಾ.15 ರಿಂದ ನಿರ್ಬಂಧಿಸಲ್ಪಡುತ್ತವೆ. ಆದರೆ, ಜನರು ಖರೀದಿ ಇತರೆ ಹಣಕಾಸು ಸಂದರ್ಭದಲ್ಲಿ ಬಳಕೆ ಮಾಡುವ ಪೇಟಿಎಂ ಯುಪಿಐ ಸೇವೆ ಮುಂದುವರೆಯುತ್ತದೆ. ಪೇಟಿಎಂ ಆಪ್ ಗೆ ಯೆಸ್ ಬ್ಯಾಂಕ್ ಜೊತೆ ಒಪ್ಪಂದಕ್ಕೆ ಎನ್‌ಪಿಸಿಐ ಅನುಮತಿ ನೀಡಿದೆ.

ಪೇಟಿಎಂ ಬಳಕೆದಾರರು ಕಳುಹಿಸುವ ಹಣದ ವ್ಯವಹಾರ ಯೆಸ್ ಬ್ಯಾಂಕ್ ಮೂಲಕ ನಡೆಯುತ್ತದೆ. ಹೀಗಾಗಿ ಪೇಟಿಎಂ ಸೇವೆ ಮುಂದುವರೆಯುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತರ ಮೂರು ಬ್ಯಾಂಕ್ ಗಳ ಮೂಲಕ UPI ಅನ್ನು ಮುಂದುವರಿಸಲು Paytm ಅನುಮೋದನೆ ಪಡೆದಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI) ಗುರುವಾರ One97 ಕಮ್ಯುನಿಕೇಷನ್ಸ್(OCL) ಬ್ರ್ಯಾಂಡ್ Paytm ಅನ್ನು ನಿರ್ವಹಿಸು ತ್ತದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ನಲ್ಲಿ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪೂರೈಕೆದಾರರಾಗಿ (TPAP) ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.

ನಾಲ್ಕು ಬ್ಯಾಂಕ್‌ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI), ಆಕ್ಸಿಸ್ ಬ್ಯಾಂಕ್, HDFC ಬ್ಯಾಂಕ್ ಮತ್ತು YES ಬ್ಯಾಂಕ್ – Paytm ಗೆ ಪಾವತಿ ಸೇವಾ ಪೂರೈಕೆದಾರರಾಗಿ(PSP ಗಳು) ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗಿದೆ.